ಬಿಗ್ ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ಹನುಮಂತ ಗೆಲುವು ಸಾಧಿಸಿದ್ದಾರೆ. ಇದುವರೆಗೂ ಯಾರು ಪಡೆಯದಷ್ಟು ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಕುರಿಗಾಯಿ ಹನುಮಂತ 5 ಕೋಟಿಗೆ ಅಧಿಕ ವೋಟ್ ಪಡೆದು ಬಿಗ್ ಬಾಸ್ ಟ್ರೋಪಿ ಗೆದ್ದುಕೊಂಡಿದ್ದಾರೆ. ಈ ಮಧ್ಯೆ ಹನುಮಂತನ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ ನಟಿ ಹಂಸ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಹನುಮಂತ ಸಿಂಪತಿ ಕ್ರಿಯೇಟ್ ಮಾಡಿದ್ದಾರೆ, ಸರಳತೆ ನಾಟಕ ಆಡುತ್ತಿದ್ದಾರೆ, ದಲಿತಾ ಎನ್ನುವ ಜಾತಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎಂದು ಹಂಸ ಹೇಳಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಸಾಕಷ್ಟು ಜನರು ಹಂಸ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಕೊನೆಗೂ ಹಂಸ ತಾವಾಡಿದ ಮಾತಿಗೆ ಕ್ಷಮೆ ಕೇಳಿದ್ದಾರೆ.
ಹನುಮಂತನ ಬಗ್ಗೆ ಇಲ್ಲ ಸಲ್ಲದ ಮಾತನಾಡಿದ್ದ ಹಂಸ ನಾರಾಯಣಸ್ವಾಮಿ ಇದೀಗ ಹನುಮಂತನ ಗೆಲುವಿನ ಬಳಿಕ ಕ್ಷಮೆ ಕೇಳಿದ್ದು ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ನಾನು ಒಂದು ಚಾನೆಲ್ನಲ್ಲಿ ಕೊಟ್ಟ ಸ್ಟೇಟ್ಮೆಂಟ್ ತುಂಬಾ ವಿವಾದ ಸೃಷ್ಟಿ ಮಾಡಿದೆ. ಕೆಲವರು ಅದನ್ನು ಬೇರೆ ರೀತಿ ಅರ್ಥೈಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡುತ್ತಿದ್ದಾರೆ. ಖಂಡಿತವಾಗಿಯೂ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ಬೇಸರ ಆಗಿದ್ದರೆ ಅವರಿಗೆಲ್ಲಾ ನಾನು ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ, ದೊಡ್ಡ ಮನಸ್ಸು ಮಾಡಿ ನನ್ನ ಮಾತುಗಳನ್ನು ಮರೆತುಬಿಡಿ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ‘ ಎಂದು ಹಂಸ ಕ್ಷಮೆಯಾಚಿಸಿದ್ದಾರೆ.