ಅನೇಕ ಜನರಿಗೆ ರಾತ್ರಿಯಲ್ಲಿ ಬೆಲ್ಲವನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಅಲ್ಲದೆ, ರಾತ್ರಿ ಮಲಗುವಾಗ ಬೆಲ್ಲವನ್ನು ತಿನ್ನುವುದರಿಂದ ಯಾವ ಯಾವ ಸಮಸ್ಯೆಗಳು ದೂರವಾಗುತ್ತವೆ ಎಂಬ ವಿಚಾರ ಅನೇಕರಿಗೆ ಗೊತ್ತಿಲ್ಲ.. ಬನ್ನಿ ಈ ಬಗ್ಗೆ ತಿಳಿಯೋಣ.
PM ಮೋದಿ, ಅಮಿತ್ ಶಾ ನರಕಕ್ಕೆ ಹೋಗ್ತಾರೆ, ಇದು ಸತ್ಯ: ಭವಿಷ್ಯ ನುಡಿದ ಮಲ್ಲಿಕಾರ್ಜುನ ಖರ್ಗೆ!
ಬೆಲ್ಲವನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಶೀತ ವಾತಾವರಣದಲ್ಲಿ ರಾತ್ರಿ ಊಟದ ನಂತರ ಬೆಲ್ಲವನ್ನು ಸೇವಿಸುತ್ತಾ ಬಂದರೆ ಅದು ದೇಹಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ. ಬೆಲ್ಲವು ದೇಹವನ್ನು ಬೆಚ್ಚಗಾಗಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12 ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿದೆ.
ನಮ್ಮ ಭಾರತ ದೇಶದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು. ನೀವು ಅದನ್ನು ಮಧ್ಯಾಹ್ನವೂ ತಿನ್ನಬಹುದು. ಬೆಲ್ಲವನ್ನು ತಿನ್ನಲು ಉತ್ತಮ ಸಮಯವೆಂದರೆ ಊಟದ ನಂತರ. ಇದು ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಇದಲ್ಲದೆ ಊಟದ ಬಳಿಕ ಬೆಲ್ಲದ ಸೇವನೆಯಿಂದ ಹಲವು ಪ್ರಯೋಜನಗಳಿವೆ. ಅವುಗಳನ್ನು ಈ ಕೆಳಗೆ ತಿಳಿಸಲಾಗಿದೆ.
ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು:-
ಊಟದ ನಂತರ ಬೆಲ್ಲ ತಿನ್ನುವುದರಿಂದ ಜೀರ್ಣಕಾರಿ ಕಿಣ್ವಗಳು ಉತ್ತೇಜಿತವಾಗುತ್ತವೆ. ಇದರಿಂದಾಗಿ, ಆಹಾರ ಸುಲಭವಾಗಿ ಬೇಗನೆ ಜೀರ್ಣವಾಗುತ್ತದೆ. ಬೆಲ್ಲ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಬೆಲ್ಲದಲ್ಲಿ Anti ಆಕ್ಸಿಡೆಂಟ್ಗಳು ಹೇರಳವಾಗಿರುತ್ತವೆ. ಇದು ದೇಹದಲ್ಲಿನ ಫ್ರೀ ರಾಡಿಕಲ್ಸ್ಗಳನ್ನು ನಿಯಂತ್ರಿಸುತ್ತದೆ. ಊಟದ ಬಳಿಕ ಬೆಲ್ಲ ಸೇವನೆ ಮಾಡೋದರಿಂದ ಒತ್ತಡ ಕಡಿಮೆಯಾಗುತ್ತದೆ. ಇದರ ಜೊತೆಗೆ ದೀರ್ಘಕಾಲದ ಕಾಯಿಲೆಗಳ ಅಪಾಯಮಟ್ಟವನ್ನು ಬೆಲ್ಲ ಕಡಿಮೆ ಮಾಡುತ್ತದೆ.
ಯಕೃತ್ ಶುದ್ಧೀಕರಣ:-
ಊಟದ ನಂತರ ಬೆಲ್ಲ ತಿನ್ನುವುದರಿಂದ ದೇಹದಲ್ಲಿನ ಜೀವರಾಸಾಯನಿಕ ಕ್ರಿಯೆ ವೇಗವಾಗಿ, ಬಲವಾಗಿ ಬದಲಾಗುತ್ತದೆ. ಇದು ತೂಕ ನಿಯಂತ್ರಣವನ್ನು ಸುಲಭಗೊಳಿಸುತ್ತದೆ. ಬೆಲ್ಲದಲ್ಲಿ ನೈಸರ್ಗಿಕವಾದ ನಿರ್ವಿಶೀಕರಣ ಗುಣಗಳಿವೆ. ಇದು ನಮ್ಮ ದೇಹದಲ್ಲಿನ ವಿಷವನ್ನು ತೆಗೆದುಹಾಕಿ ಯಕೃತ್ತನ್ನು ಶುದ್ಧೀಕರಿಸುತ್ತದೆ.
ಇನ್ನೂ ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ಬೆಲ್ಲ ಸೇವನೆ ಮಾಡೋದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಏರಿಕೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರು , ಮಕ್ಕಳಿಗೆ ಇದು ಒಳ್ಳೆಯದು. ದೀರ್ಘಕಾಲದ ಮಲಬದ್ಧತೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಿಯಮಿತವಾಗಿ ಬೆಲ್ಲವನ್ನು ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಬೆಲ್ಲದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಯಾಂಟಿಆಕ್ಸಿಡೆಂಟ್ಗಳು ಹೇರಳವಾಗಿರುವುದರಿಂದ, ಇದು ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಶೀತ ಕೆಮ್ಮು : ಚಳಿಗಾಲದಲ್ಲಿ ಪದೇ ಪದೇ ನೆಗಡಿ ಮತ್ತು ಕೆಮ್ಮು ಬರುತ್ತಿದ್ದರೆ ಬೆಲ್ಲವನ್ನು ತಿನ್ನಲು ಪ್ರಾರಂಭಿಸಿ. ರಾತ್ರಿ ಹೊತ್ತು ಬೆಲ್ಲವನ್ನು ತಿಂದರೆ, ಶೀತ, ಕೆಮ್ಮು ಮತ್ತು ಕಫದಿಂದ ಪರಿಹಾರವನ್ನು ಪಡೆಯಬಹುದು. ಬೆಲ್ಲವನ್ನು ಹಾಲಿನಲ್ಲಿ ಕುದಿಸಿ ಕುಡಿದರೆ ತುಂಬಾ ಒಳ್ಳೆಯದು.
ಚರ್ಮದ ಸಮಸ್ಯೆ : ಬೆಲ್ಲವು ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಸ್ವಲ್ಪ ಬೆಲ್ಲವನ್ನು ಸೇವಿಸುವುದರಿಂದ ಮೊಡವೆಗಳನ್ನು ಮಾಯವಾಗುತ್ತವೆ. ಅಲ್ಲದೆ, ಚರ್ಮವು ಹೊಳೆಯುವಂತೆ ಮಾಡುತ್ತದೆ ಮತ್ತು ಬೆಲ್ಲವು ಒಳಗಿನಿಂದ ತ್ವಚೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
ಬೆಲ್ಲದ ಟೀ:-
ಸಕ್ಕರೆ ಬದಲಾಗಿ ಬೆಲ್ಲದ ಟೀ ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ.