ನವದೆಹಲಿ:- ನವದೆಹಲಿಯಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ಪ್ರಧಾನಿ ಮೋದಿ ಅವರು ಧರಿಸಿದ್ದ ಉಡುಗೆ ಗಮನ ಸೆಳೆದಿದೆ.
ಇಂದು 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ವಿಶೇಷ ಶೈಲಿಯಲ್ಲಿ ಕಾಣಿಸಿಕೊಂಡರು,
ಬಿಳಿ ಬಣ್ಣದ ಕುರ್ತಾ, ಪೈಜಾ, ಕಾಫಿ ಬಣ್ಣದ ಜಾಕೆಟ್, ಹಳಸಿ, ಕೇಸರಿ ಮಿಶ್ರಿತ ಪೇಟದಲ್ಲಿ ಸುಂದರವಾಗಿ ಕಂಡರು. ವರ್ಣರಂಜಿತ ಪೇಟವನ್ನು ಧರಿಸುವ ತಮ್ಮ ಸಂಪ್ರದಾಯವನ್ನು ಮುಂದುವರೆಸಿದರು.
ಈ ಹಿಂದೆ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಹುವರ್ಣದ ಬಾಂಧನಿ ಪ್ರಿಂಟ್ ಪೇಟವನ್ನು ಧರಿಸಿದ್ದರು. ಬಾಂಧನಿ ಒಂದು ರೀತಿಯ ಟೈ-ಡೈ ಬಟ್ಟೆಯಾಗಿದೆ, ಇದು ಗುಜರಾತ್ ಮತ್ತು ರಾಜಸ್ಥಾನದಲ್ಲಿ ಜನಪ್ರಿಯವಾಗಿದೆ. ಬಟ್ಟೆಯನ್ನು ಕಟ್ಟಿ ಗಂಟು ಹಾಕುವ ಮೂಲಕ ಬಣ್ಣ ಹಾಕುವ ವಿಧಾನ ಇದಾಗಿದೆ. ಜಾರ್ಜೆಟ್, ಶಿಫಾನ್, ರೇಷ್ಮೆ ಮತ್ತು ಹತ್ತಿ ಬಟ್ಟೆಯನ್ನು ಕಲರ್ ಪೂಲ್ಗೆ ಹಾಕುವ ಮೊದಲು ದಾರದಿಂದ ಬಿಗಿಯಾಗಿ ಕಟ್ಟಲಾಗುತ್ತದೆ ಮತ್ತು ಈ ದಾರವನ್ನು ತೆರೆದಾಗ, ಕಟ್ಟಿದ ಭಾಗವು ಬಣ್ಣವಾಗುತ್ತದೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಭಾನುವಾರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯ ಕೋರಿದರು.
ಇಂದು ನಾವು ನಮ್ಮ ವೈಭವಯುತ ಗಣರಾಜ್ಯದ 75 ನೇ ವರ್ಷಾಚರಣೆಯನ್ನು ಆಚರಿಸುತ್ತಿದ್ದೇವೆ, ಈ ಸಂದರ್ಭದಲ್ಲಿ ನಮ್ಮ ಸಂವಿಧಾನವನ್ನು ರೂಪಿಸಿದ ಮತ್ತು ಪ್ರಜಾಪ್ರಭುತ್ವ, ಘನತೆ ಮತ್ತು ಏಕತೆಯ ಆಧಾರದ ಮೇಲೆ ನಮ್ಮ ಅಭಿವೃದ್ಧಿ ಪಯಣವನ್ನು ಖಾತರಿಪಡಿಸಿದ ಎಲ್ಲ ಮಹಾನ್ ವ್ಯಕ್ತಿಗಳಿಗೆ ನಾವು ನಮನ ಸಲ್ಲಿಸುತ್ತೇವೆ ಎಂದರು.