ವಿಜಯನಗರ : ವಿಜಯನಗರದಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಅನಾಹುತ ನಡೆದಿದೆ. ದೇಶದ ಅತೀ ಎತ್ತರದ ಎರಡನೇ ರಾಷ್ಟಧ್ವಜ ಧ್ವಜಸ್ಥಂಭದಿಂದ ಏರುತ್ತಿರುವಾಗಲೇ ಕೆಳಗೆ ಹರಿದು ಬಿದ್ದಿದೆ. ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಘಟನೆ ನಡೆದಿದೆ. ಸಚಿವ ಜಮೀರ್ ಅಹಮ್ಮದ್ ಖಾನ್ ಧ್ವಜಾರೋಹಣ ಮಾಡಿದ ಬಳಿಕ ಮೇಲೇರುತ್ತಿದ್ದ ರಾಷ್ಟ್ರಧ್ವಜ , ಮೇಲೇರುತ್ತಿರುವಾಗ ವೈರ್ ಗಳು ಕಟ್ ಆಗಿ ಕೆಳಗೆ ಬಿದ್ದಿವೆ.
ಇನ್ನೂ 108 ಅಡಿ ಎತ್ತರದ ಧ್ವಜ ಸ್ತಂಭದಿಂದ ಹರಿದು ಬಿದ್ದ ರಾಷ್ಟ ಧ್ವಜ ಪ್ರಕರಣ ಸಂಬಂಧ ಸಚಿವ ಜಮೀರ್ ಅಹ್ಮದ್ ಮಾತನಾಡಿ, ರಾಷ್ಟಧ್ವಜ ಬಿದ್ದಿದೆ, ಯಾರೂ ಆತಂಕ ಪಡಬೇಡಿ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.