ಬಳ್ಳಾರಿ: ಜಿಲ್ಲಾಸ್ಪತ್ರೆ ವೈದ್ಯ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ವೈದ್ಯರನ್ನು ಕಿಡ್ನಾಪ್ ಮಾಡಿದವರೇ ಊರು ಊರು ಸುತ್ತಾಡಿಸಿ ಬಿಟ್ಟಿದ್ದಾರೆ. ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಸುನೀಲ್ ಅವರನ್ನು ಬೆಳಗ್ಗೆ ಕಿಡ್ನಾಪ್ ಮಾಡಲಾಗಿತ್ತು. ಬೆಳಿಗ್ಗೆ 6 ಗಂಟೆ ವೇಳೆ ವಾಕಿಂಗ್ ಮಾಡೋವಾಗ ಅಪಹರಿಸಲಾಗಿತ್ತು.
ಮೂರು ಕೋಟಿ ನಗದು ಮತ್ತು ಮೂರು ಕೋಟಿ ಬೆಲೆಬಾಳುವ ಬಂಗಾರ ಬೇಡಿಕೆ ಇಟ್ಟಿದ್ದರು. ಎರಡು ಬಾರಿ ವೈದ್ಯರ ಮೊಬೈಲ್ ನಿಂದಲೇ ಕರೆ ಮಾಡಿ ಹಿಂದಿಯಲ್ಲಿ ಮಾತನಾಡಿದರು. ಡಾ.ಸುನೀಲ್ ಮೊಬೈಲ್ನಿಂದ ಅವರ ಸಹೋದರ, ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ವೇಣು ಅವರಿಗೆ ಕರೆ ಮಾಡಿ 6 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ವೇಣು ಬಳ್ಳಾರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ದೂರು ಪಡೆದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದರು. ಆದರೆ ಕಳೆದ ರಾತ್ರಿ 9 ಗಂಟೆ ಹೊತ್ತಿಗೆ ವೈದ್ಯರೊಂದಿಗೆ ಬಿಟ್ಟು ಹೋಗಿದ್ದಾರೆ. ಕುರುಗೋಡು ತಾಲೂಕಿನ ಸೋಮ ಸಮುದ್ರ ಗ್ರಾಮದ ಹೊಲ ವೊಂದರಲ್ಲಿ ಬಿಟ್ಟು ಹೋಗಿದ್ದಾರೆ.