ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಕ್ಷಣಗಣನೆ ಶುರುವಾಗಿದೆ. ಮೆಗಾ ಆಕ್ಷನ್ನಲ್ಲಿ ಸ್ಟಾರ್ ಆಟಗಾರರನ್ನು ಖರೀದಿ ಮಾಡಿ ಎಲ್ಲಾ ತಂಡಗಳು ಬಲಿಷ್ಠ ಆಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಸ್ಟ್ರಾಂಗ್ ಆಗಿರೋ ಟೀಮ್ ಅನ್ನೇ ರೆಡಿ ಮಾಡಿಕೊಂಡಿದೆ. ಆದರೆ ಕ್ಯಾಪ್ಟನ್ ಯಾರು ಎನ್ನುವುದು ಎಲ್ಲರ ಕುತೂಹಲ ಕೆರಳಿಸಿದೆ.
ಗ್ರಾಮೀಣ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸಬೇಕು: ಪ್ರಿಯಾಂಕ ಖರ್ಗೆ!
ಆರ್ಸಿಬಿ ಮುಂದಿನ ಸೀಸನ್ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ. ಆದರೀಗ, ಆರ್ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದೇ ಪ್ರಶ್ನೆ.
ಮುಂದಿನ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ವಿರಾಟ್ ಕೊಹ್ಲಿಯೇ ಮುನ್ನಡೆಸುವುದು ಬಹುತೇಕ ಕನ್ಫರ್ಮ್ ಆಗಿದೆ. ಈ ಬಗ್ಗೆ ಆರ್ಸಿಬಿ ತಂಡದ ಮಾಜಿ ಸ್ಟಾರ್ ಬ್ಯಾಟರ್ ಎಬಿ ಡಿವಿಲಿಯರ್ಸ್ ಮಾತಾಡಿದ್ದಾರೆ.
ನನ್ನ ಪ್ರಕಾರ ಆರ್ಸಿಬಿ ನಾಯಕತ್ವಕ್ಕೆ ವಿರಾಟ್ ಒಬ್ಬರೇ ಆಯ್ಕೆ ಎನಿಸುತ್ತದೆ. ಸದ್ಯ ವಿರಾಟ್ ವೃತ್ತಿ ಜೀವನದ ಕೊನೆ ಹಂತದಲ್ಲಿದ್ದಾರೆ. ಇವರು ಬೇಗ ಫಾರ್ಮ್ಗೆ ಬಂದು ತಂಡವನ್ನು ಗೆಲ್ಲಿಸಬೇಕು. ಇದು ಕೊಹ್ಲಿ ವೃತ್ತಿಜೀವನಕ್ಕೆ ತುಂಬ ಮಹತ್ವದಾಗಿದೆ ಎಂದರು.
ಈ ಮೂಲಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್ಸಿಬಿ ಕ್ಯಾಪ್ಟನ್ ಆಗೋದು ಗ್ಯಾರಂಟಿ ಆಗಿದೆ.