ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ತನ್ನ ಕಣ್ಣುಗಳಿಂದಲೇ ಫೇಮಸ್ ಆಗಿರುವ ಮೊನಾಲಿಸಾಳನ್ನು ನೋಡಲು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಕುಂಭಮೇಳದಲ್ಲಿ ಎಲ್ಲರ ಬಾಯಲ್ಲೂ ಮೊನಾಲಿಸಾಳದಲ್ಲೇ ಮಾತು, ಆಕೆಯ ಆಕರ್ಷಣೀಯ ಕಣ್ಣುಗಳಿಗೆ ಮನಸೋತವರು ಎಷ್ಟೋ ಮಂದಿ.
Padma Awards 2024: ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ 9 ಮಂದಿ! ಯಾರವರು? ಇಲ್ಲಿದೆ ಮಾಹಿತಿ!
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭ ಮೇಳ ಆರಂಭವಾಗಿ ಕೆಲವೇ ದಿನದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಜೇನು ಕಣ್ಣ ಸುಂದರಿ ಮೊನಾಲಿಸಾ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸ್ಟಾರ್ ಆದ ಮೊನಾಲಿಸಾಗೆ ಈ ಸೌಂದರ್ಯವೇ ಶಾಪವಾಗಿದೆ.
ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಣಿ ಮಾರಲು ಬಂದಿದ್ದ ಮೊನಾಲಿಸಾ ಸೋಷಿಯಲ್ ಮೀಡಿಯಾ ಸೆನ್ಸೆಷನ್ ಆಗಿದ್ದಾಳೆ. ಇದಲ್ಲದೇ ಆಕೆಗೆ ಬಾಲಿವುಡ್ ಸಿನಿಮಾದ ಜೊತೆಗೆ ರಾಮ್ ಚರಣ್ ನಟನೆಯ ಮುಂಬರುವ ಆರ್ ಸಿ 16 ಚಿತ್ರದಲ್ಲೂ ನಟಿಸಲು ಅವಕಾಶ ಸಿಕ್ಕಿದೆ ಎಂಬ ವರದಿಗಳಿವೆ.
ಇದೆಲ್ಲವನ್ನು ಬದಿಗಿಟ್ಟು ಕೆಲವರು ಮಹಾ ಕುಂಭಮೇಳಕ್ಕೆ ಮಾರುವೇಷದಲ್ಲಿ ಬಂದು ಮೊನಾಲಿಸಾ ಮಣಿ ಮಾರುತ್ತಿದ್ದರು ಅಂತ ನಕಲಿ ವಿಡಿಯೋಗಳನ್ನು ಸೃಷ್ಟಿಸಿದ್ದಾರೆ. ಇದನ್ನು ನೋಡಿದ ಕೆಲವರು ಬಿದ್ದು ಬಿದ್ದು ನಗುತ್ತಿದ್ದಾರೆ.
ವಿಚಿತ್ರ ಅಂದ್ರೆ AI ಮೂಲಕ ಮೊನಾಲಿಸಾ ಐಎಎಸ್ ಅಧಿಕಾರಿಯ ರೂಪದಲ್ಲಿರುವ ಫೊಟೋಗಳನ್ನು ರಚಿಸಿ ವೈರಲ್ ಮಾಡಲಾಗುತ್ತಿದೆ.. 16 ವರ್ಷದ ಮೊನಾಲಿಸಾ IAS ಅಧಿಕಾರಿ ಎನ್ನುವುದು ಶುದ್ಧ ಸುಳ್ಳು.. ಇದೇಲ್ಲ ಕಿಡಿಗೇಡಿಗಳ ಕೈವಾಡ..
ಮಹಾ ಕುಂಭಮೇಳ ಭಾರತದ ಅತಿದೊಡ್ಡ ಧಾರ್ಮಿಕ ಆಚರಣೆಯಾಗಿದೆ. ದೇಶ ಮತ್ತು ವಿದೇಶಗಳಿಂದ ಕೋಟ್ಯಂತರ ಜನರು ಇದರಲ್ಲಿ ಭಾಗವಹಿಸುತ್ತಾರೆ. 2025ರಲ್ಲಿ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ನಡೆಯಲಿದ್ದು, ಈ ಜಾತ್ರೆಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮಹಾ ಕುಂಭಮೇಳವನ್ನು 12 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಮೂರು ಪವಿತ್ರ ನದಿಗಳ ಸಂಗಮದೊಂದಿಗೆ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಸಂಪ್ರದಾಯದ ಅದ್ಭುತ ಸಂಗಮಕ್ಕೆ ಇದು ಸಾಕ್ಷಿಯಾಗಿದೆ.