ನಿಮ್ಮ ದೇಹಕ್ಕೆ ಪೌಷ್ಟಿಕಾಂಶ ಯಾವ ಪ್ರಮಾಣದಲ್ಲಿ ಬೇಕಾಗುತ್ತದೆ ಅದೇ ರೀತಿ ದೇಹದ ತೂಕ ನಿಯಂತ್ರಣ ಕೂಡ ಮಾಡಿಕೊಳ್ಳಬೇಕಾಗುತ್ತದೆ. ಯಾವ ಧಾನ್ಯ, ತರಕಾರಿ ತಿನ್ನುತ್ತೇವೆ ಅದರ ಮೇಲೆ ನಮ್ಮ ಆರೋಗ್ಯ ನಿಂತಿರುತ್ತದೆ.
ಸಾವಯುವ ಮೂಲದಿಂದ ಕೂಡಿರುವ ಜೀವನ ಎಲ್ಲರ ನಿರೀಕ್ಷೆ. ನಮ್ಮ ಆರೋಗ್ಯದ ರಕ್ಷಣೆಗಾಗಿ ಎಲ್ಲಾ ಆಯಾಮಗಳಲ್ಲೂ ನಾವು ಆಲೋಚನೆ ಮಾಡಿದರೆ ಮೊಳಕೆ ಕಟ್ಟಿದ ಕಾಳುಗಳು ಅಡ್ಡ ಪರಿಣಾಮವಿಲ್ಲದೆ ನಮಗೆ ಸಹಾಯ ಮಾಡುತ್ತವೆ.
ಹೆಸರು ಕಾಳು ತ್ವರಿತ ತೂಕ ಇಳಿಕೆಗೆ ಸಹಾಯಕವಾಗಿದೆ. ಎರಡು ದಿನ ಹೆಸರು ಕಾಳನ್ನು ನೆನೆಸಿಟ್ಟು, ಮೊಳಕೆ ಬರುವಂತೆ ಮಾಡಿ. ನಂತರ ಅದನ್ನು ನೀವು ತಿನ್ನಬಹುದು. ಈ ಮೊಳಕೆ ಬಂದ ಕಾಳನ್ನು ತಿನ್ನುವುದರಿಂದ ಸಾವಿರಾರು ರೋಗಗಳು ಗುಣವಾಗುತ್ತದೆ. ಹಲವು ಕ್ಲಿಷ್ಟ ರೋಗಗಳಿಂದ ಮುಕ್ತಿ ಪಡೆಯುವ ಸಾಧ್ಯತೆಗಳಿವೆ.
ರೋಗ ನಿರೋಧಕ ಶಕ್ತಿ ಹೆಚ್ಚಳ: ಮೊಳಕೆಯೊಡೆದ ಹೆಸರು ಕಾಳಿನಲ್ಲಿ ಆಂಟಿ-ಆಕ್ಸಿಡೆಂಟ್ ಅಧಿಕವಾಗಿದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೇ, ಇದು ವಿಟಮಿನ್ ಎ, ಬಿ, ಸಿ, ಇ, ನಿಯಾಸಿನ್, ಪೊಟ್ಯಾಸಿಯಮ್, ರಂಜಕ, ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ.
ಮಧುಮೇಹ: ಮಧುಮೇಹಿಗಳಿಗೆ ಮೊಳಕೆ ಬಂದ ಹೆಸರು ಕಾಳುಗಳು ಬಹಳ ಒಳ್ಳೆಯದು ಎಂದು ಆಹಾರ ತಜ್ಞರು ಹೇಳುತ್ತಾರೆ. ಮೊಳಕೆಯೊಡೆದ ಮುಂಗ್ ಬೀನ್ಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಮಧುಮೇಹಿಗಳು ಮೊಳಕೆ ಬಂದ ಹೆಸರು ಕಾಳನ್ನು ಪ್ರತಿದಿನ ತಿನ್ನಬಹುದು.
ಕಣ್ಣಿನ ಸಮಸ್ಯೆ: ದೃಷ್ಟಿಗೆ ಒಳ್ಳೆಯದು. ಮೊಳಕೆ ಬಂದ ಹೆಸರು ಕಾಳುಗಳು ಕಣ್ಣಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆಹಾರ ತಜ್ಞ ಬಿಸ್ವಜಿತ್ ದಾಸ್ ಹೇಳುತ್ತಾರೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
ತೂಕ ಇಳಿಕೆ: ತೂಕ ಇಳಿಕೆಗೂ ಮೊಳಕೆಯೊಡೆದ ಹೆಸರು ಕಾಳು ಸಹಾಯಕವಾಗಿದೆ. ಮೊಳಕೆಯೊಡೆದ ಹೆಸರು ಕಾಳಿನಲ್ಲಿ ಸಾಕಷ್ಟು ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳಿವೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ವೈದ್ಯಕೀಯ ಕ್ಷೇತ್ರವು ಹೆಚ್ಚಾಗಿ ಅಭಿವೃದ್ಧಿಗೊಂಡಿದ್ದರೂ, ಕೆಲ ನೈಸರ್ಗಿಕ ಆಹಾರ ಪದಾರ್ಥಗಳಿಂದಲೇ ನಾವು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಆಹಾರದಲ್ಲಿ ಮೊಳಕೆ ಕಾಳುಗಳನ್ನು ಸೇರಿಸುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ಪಡೆಯಬಹುದು.
ರಕ್ತಹೀನತೆ: ಮೊಳಕೆಯೊಡೆದ ಹೆಸರು ಕಾಳಿನಲ್ಲಿ ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲ ಹೇರಳವಾಗಿರುತ್ತದೆ. ಇದು ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಹೃದ್ರೋಗ: ಮೊಳಕೆಯೊಡೆದ ಹೆಸರು ಕಾಳುಗಳು ಹೃದಯದ ಆರೋಗ್ಯ ರಕ್ಷಿಸುತ್ತದೆ. ಇದರಲ್ಲಿ ಹೆಚ್ಚು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಅಲ್ಲದೇ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೆಸರು ಕಾಳು ಮೊಳಕೆಯೊಡೆಸುವ ವಿಧಾನ: ಹೆಸರು ಕಾಳುಗಳನ್ನು 8 – 10 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೀರಿನಲ್ಲಿ ನೆನೆಸಿ. 8 ಗಂಟೆಗಳ ಕಾಲ ನೆನೆದ ಬಳಿಕ ಕಾಳುಗಳು ಗಮನಾರ್ಹವಾಗಿ ಬೆಳೆಯುತ್ತದೆ. ಹೆಸರು ಕಾಳುಗಳನ್ನು ಬರಿದು ಮಾಡಿದ ನಂತರ ಚೆನ್ನಾಗಿ ತೊಳೆಯಿರಿ ಮತ್ತು ಅದನ್ನು ಪಕ್ಕಕ್ಕೆ ಇರಿಸಿಕೊಳ್ಳಿರಿ.
ಒಣಗಿದ ಹೆಸರು ಕಾಳುಗಳನ್ನು ಒಂದು ಬೌಲ್ನಲ್ಲಿ ಹಾಕಿ, ಮುಚ್ಚಳದಿಂದ ಮುಚ್ಚಿರಿ ಮತ್ತು ಕತ್ತಲೆ ಸ್ಥಳದಲ್ಲಿ ಇರಿಸಿ. ನೀವು ಇದನ್ನು ಅಡುಗೆ ಮನೆಯಲ್ಲಿ ಸಹ ಇಡಬಹುದು. ಅದು ಮೊಳಕೆಯೊಡೆಯಲು 24 ಗಂಟೆಗಳ ಕಾಲ ಅವಕಾಶ ನೀಡಿ. ಸುಮಾರು 24 ಗಂಟೆಗಳ ನಂತರ, ಇದು ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ.