ಇಸ್ಲಾಮಾಬಾದ್: 2022ರಲ್ಲಿ ಪಾಕಿಸ್ತಾನದ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಭಾರತೀಯ ಮೀನುಗಾರನೋರ್ವ ಕರಾಚಿ ಜೈಲಿನಲ್ಲಿ ಮೃತಪಟ್ಟಿದ್ದಾನೆ.ಈ ಮೂಲಕ ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಮೃತಪಟ್ಟ ಮೀನುಗಾರರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಬಾಬು ಕರಾಚಿ ಜೈಲಿನಲ್ಲಿ ಮೃತಪಟ್ಟ ಮೀನುಗಾರ. ಬಾಬು ಅವರ ಶಿಕ್ಷೆ ಅವಧಿ ಮುಗಿದಿದ್ದರೂ ಪಾಕಿಸ್ತಾನದ ಅಧಿಕಾರಿಗಳು ಬಿಡುಗಡೆ ಮಾಡಲಿಲ್ಲ ಎಂದು ಹೇಳಲಾಗಿದೆ.
ಬಾಬು ಜೊತೆಗೆ ಇನ್ನು 180 ಭಾರತೀಯ ಮೀನುಗಾರರು ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿ ಪಾಕಿಸ್ತಾನದ ಜೈಲಿನಿಂದ ಬಿಡುಗಡೆಗೆ ಕಾಯುತ್ತಿದ್ದರು. ಶಿಕ್ಷೆಯ ಅವಧಿ ಮುಗಿದರೂ, ಅವರು ಭಾರತೀಯರೆಂದು ರಾಷ್ಟ್ರೀಯತೆ ದೃಢೀಕರಣ ಮಾಡಿದರೂ ಪಾಕಿಸ್ತಾನದ ಅಧಿಕಾರಿಗಳು ಅವರನ್ನು ಬಿಡುಗಡೆ ಮಾಡಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.