ಬೀದರ್ : ಮಹಿಳಾ ಸಂಘಗಳಲ್ಲಿ ಮಾಡಿದ ಸಾಲ ತೀರಿಸಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ಮಹಿಳೆಯ ಮನೆಗೆ ತಹಶೀಲ್ದಾರ್ ಶಿವಾನಂದರ ಮೇತ್ರೆ ಭೇಟಿ ನೀಡಿದರು. ಹುಲಸೂರ ತಾಲೂಕಿನ ಗಡಿಗೌಡಗಾಂವ ಗ್ರಾಮದ ರೇಷ್ಮಾ ಸುನಿಲ್ ಸೂರ್ಯವಂಶ (25) ಆತ್ಮಹತ್ಯೆ ಮಾಡಿಕೊಂಡಿದ್ದಳು. ಸುಮಾರು ಆರಕ್ಕೂ ಅಧಿಕ ವಿವಿಧ ಸಂಘಗಳಲ್ಲಿ 3 ಲಕ್ಷಗಳಷ್ಟು ಸಾಲ ಮಾಡಿಕೊಂಡಿದ್ದರು,, ಸಾಲ ತೀರಿಸಲಾಗದೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಯಮನ ಕಿರುಕುಳ: ನಾಲ್ವರು ಸಿಬ್ಬಂದಿಗಳು ಅರೆಸ್ಟ್!
ಇನ್ನೂ ಮೃತಳ ಕುಟುಂಬಕ್ಕೆ ಭೇಟಿ ನೀಡಿದ ತಹಸೀಲ್ದಾರ ಶಿವಾನಂದ ಮೇತ್ರೆ, ಕುಟುಂಬಸ್ಥರ ಜೊತೆ ಮಾತನಾಡಿ ಸಂಪೂರ್ಣ ಮಾಹಿತಿ ಪಡೆದು ಕೊಂಡಿದ್ದು, ಕೂಡಲೇ ತಪ್ಪಿಸ್ಥರ ಮೇಲೆ ಕ್ರಮ ಕೈಗೋಳ್ಳುವುದಾಗಿ ತಿಳಿಸಿದಾರೆ. ಸುಮಾರು ಆರು ಖಾಸಗಿ ಫೈನಾನ್ಸ್ ರವರ ಹತ್ತಿರ ಸಾಲ ಪಡೆದಿರುವುದಾಗಿ ತಿಳಿದು ಬಂದಿದು, ಇದರ ಬಗ್ಗೆ ಹುಲಸೂರ ತಾಲೂಕಿನಲ್ಲಿ ರುವ ಎಲ್ಲಾ ಮೈಕ್ರೋ ಫೈನಾನ್ಸ್ ನವರ ಜೊತೆಗೆ ಸಭೆ ನಡೆಸಿ ಯಾರಿಗು ಕಿರುಕುಳ ಕೊಡಬಾರದು. ಒಂದು ವೇಳೆ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನುತ್ಮಾಮಕವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ರು.