ಕಾಂತಿಯುತವಾದ, ನಯವಾದ ಕೂದಲು ತಮ್ಮದಾಗಿರಬೇಕೆಂಬುದು ಎಲ್ಲರೂ ಬಯಸುವುದು ಸಹಜ. ಆದರೆ ಅನೇಕ ಮಂದಿ ಒಣ ಕೂದಲು (), ಹಾಗೆಯೇ ಬೆಳವಣಿಗೆ ಕುಂಠಿತಗೊಂಡ, ಸ್ಪಿಟ್ ಹೇರ್ಸ್ ಹೀಗೆ ನಾನಾ ಕೂದಲು ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಆದರೆ ಈ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಪರಿಣಾಮಕಾರಿಯಾದ ಪರಿಹಾರ ಕಂಡು ಕೊಳ್ಳಬಹುದು.
ಕೂದಲು ಉದುರುವುದನ್ನು ಕಡಿಮೆ ಮಾಡಲು ಚಿಯಾ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಪ್ರತಿದಿನ ಕುಡಿಯಲು ಸಲಹೆ ನೀಡಲಾಗುತ್ತದೆ. ಚಿಯಾ ಸೀಡ್ಸ್ ಬೆರೆಸಿದ ಪಾನೀಯವನ್ನು ನೀವು ಪ್ರತಿದಿನ ಸೇವಿಸಿದರೆ, ಕೂದಲು ಉದುರುವುದು ಶೀಘ್ರದಲ್ಲೇ ಕಡಿಮೆಯಾಗುತ್ತದೆ ಮತ್ತು ಕೂದಲು ವೇಗವಾಗಿ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ.
ಹೌದು ಚಿಯಾ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಅಧಿಕವಾಗಿವೆ. ಇದು ನೆತ್ತಿಯ ಮೇಲೆ ಉರಿಯೂತವನ್ನು ಕಡಿಮೆ ಮಾಡಿ ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ.. ಈ ಚಿಯಾ ಬೀಜಗಳನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಸ್ಮೂಥಿಗಳು, ಮೊಸರು, ಓಟ್ಸ್ ಅಥವಾ ನೀರಿನಲ್ಲಿ ಬೆರೆಸಿ ಸೇವಿಸಬಹುದು.. ಆದರೇ ಚಿಯಾ ಬೀಜಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಮತ್ತು ಕೂದಲು ಉದುರುವಿಕೆಗೆ ಮೂಲ ಕಾರಣವನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ನಿವಾರಿಸುವುದು ಮುಖ್ಯ..
ಚಿಯಾ ಬೀಜಗಳ ಸೇವನೆ ಹೇಗೆ?
ಚಿಯಾ ಬೀಜಗಳನ್ನು ಸ್ಮೂತಿಯಾಗಿ ಬೆರೆಸಬಹುದು ಅಥವಾ ಮೊಸರು ಮೇಲೆ ಚಿಮುಕಿಸಬಹುದು. ನೀವು ಇದನ್ನು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ಚಿಯಾ ಪುಡಿ ಮಾಡಿ ತಿನ್ನಬಹುದು. ಇವುಗಳನ್ನು ಪ್ರತಿನಿತ್ಯ ತಿಂದರೆ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಮೃದುವಾಗುತ್ತದೆ