ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಕೃತ ಕಾಮಿಗಳ ಸಂಖ್ಯೆ ಹೆಚ್ಚಾಗಿತ್ತಿದೆ. ಇತ್ತೀಚೆಗೆ ಕಬ್ಬನ್ ಪಾರ್ಕ್ನಲ್ಲೊಬ್ಬ, ಜಯನಗರದ ಮಹಿಳಾ ಕಾಲೇಜಿನ ಬಳಿ ಒಬ್ಬ ತಮ್ಮ ಮ್ಮ ಖಾಸಗಿ ಅಂಗಾಂಗವನ್ನು ತೋರಿಸಿ ವಿಕೃತಿ ಮೆರೆದಿದ್ದ. ಇದೀಗ ಇದೇ ರೀತಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೌದು ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮರೆದ ಕಾಮುಕನನ್ನು ಜಯನಗರ ಪೊಲೀಸರು ಇದೀಗ ಬಂಧಿಸಿದ್ಧಾರೆ.
ಯಾಸೀನ್ ಎಸ್ ಬಂಧಿತ ಕಾಮುಕನಾಗಿದ್ದು, ಈತ ಕಳೆದ ಅನೇಕ ದಿನಗಳಿಂದ ಯುವತಿ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ತಿಲಕ್ ನಗರದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಕಾಮುಕ ಯಾಸೀನ್, ಯುವತಿಯನ್ನು ಎರಡು ಮೂರು ಬಾರಿ ಮಾತನಾಡಿಸಿ ಕಿರುಕುಳ ನೀಡಿದ್ದ ಎನ್ನಲಾಗಿದೆ.
Relationship Tips: ಸಂಗಾತಿ ಜೊತೆ ಗಟ್ಟಿ ಸಂಬಂಧ ನಿಭಾಯಿಸೋದು ಹೇಗೆ..? ಇಲ್ಲಿದೆ ಟಿಪ್ಸ್
ಅಷ್ಟೇ ಅಲ್ಲದೇ, ಮತ್ತೆ ಇದೇ ತಿಂಗಳ ಜನವರಿ 17 ರ ಸಂಜೆ ಬೈಕ್ ನಲ್ಲಿ ಬಂದು ಖಾಸಗಿ ಅಂಗ ತೋರಿಸಿ ಎಸ್ಕೇಪ್ ಆಗಿದ್ದ ಎಂದು ಯುವತಿ ದೂರಿದ್ದಾಳೆ. ಈ ಸಂಬಂಧ ಸಂತ್ರಸ್ತ ಯುವತಿ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಯುವತಿಯ ದೂರನ್ನು ಆಧರಿಸಿ ಆರೋಪಿಯ ಪತ್ತೆಗೆ ಮುಂದಾದ ಜಯನಗರ ಪೊಲೀಸರು ತನಿಖೆ ನಡೆಸಿ ಆರೋಪಿ ಯಾಸೀನ್ ಎಂಬಾತನನ್ನು ಬಂಧಿಸಿದ್ದಾರೆ.