ಮೈಸೂರು:- ಜೆಡಿಎಸ್ ಮುಖಂಡ ಹನುಮಂತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ವಿನೋದ್, ಮೋಹನ್, ಯೋಗ, ಸಂತು, ಆಂಥೋಣಿ, ವೇಣುಗೋಪಾಲ್ ಮತ್ತು ಮಂಜು ಬಂಧಿತರು. ಡಿಸೆಂಬರ್ 22ರಂದು ಮೈಸೂರು ಹೊರವಲಯದ ಬೆಲವತ್ತ ಗ್ರಾಮದಲ್ಲಿ ಜೆಡಿಎಸ್ ಮುಖಂಡ ಹನುಮಂತು ಕೊಲೆಯಾಗಿತ್ತು. ರಾತ್ರಿ ಬೈಕ್ನಲ್ಲಿ ಹೋಗುತ್ತಿದ್ದ ಹನುಮಂತುರನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಬೈಕ್ ಬೀಳಿಸಿ ಮನಸೋ ಇಚ್ಚೇ ಇರಿದು ಕೊಲೆ ಮಾಡಿದ್ದರು. ಜನರ ಓಡಾಟವಿರುವ ಜಾಗದಲ್ಲಿ ಕ್ಷಣಾರ್ಧದಲ್ಲಿ ನಡೆದು ಹೋದ ಭೀಕರ ಕೊಲೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.
57 ವರ್ಷದ ಹನುಮಂತು ಮೈಸೂರಿನ ಬೆಲವತ್ತ ಗ್ರಾಮದ ನಿವಾಸಿ. ರೈತರಾಗಿದ್ಣ ಹನುಮಂತು ಜೆಡಿಎಸ್ ಪಕ್ಷದ ಮುಖಂಡ ಕೂಡ ಹೌದು. ಜೊತೆಗೆ ಹಲವು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಸಾಕಷ್ಟು ಹೋರಾಟ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು. ಯಾವುದೇ ಹೋರಾಟ ಅಂತಾ ಅಂದ್ರು ಹನುಮಂತು ಮಂಚೂಣಿಯಲ್ಲಿರುತ್ತಿದ್ದರು. ಎಲ್ಲರ ಜೊತೆಯಲ್ಲೂ ಹನುಮಂತು ಚೆನ್ನಾಗಿಯೇ ಇದ್ದರು. ಇಷ್ಟೊಂದು ಆ್ಯಕ್ಟೀವ್ ಆಗಿದ್ದ ಹನುಮಂತು ಕೊಲೆಯಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.