ರಾಮನಗರ:- ಮುಡಾ ಕೇಸ್ ನಲ್ಲಿ ಸಿದ್ದರಾಮಯ್ಯ ಹೆಸರು ಕೆಡಿಸಲು ಬಿಜೆಪಿ ಯತ್ನ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕರ್ನಾಟಕದಲ್ಲಿ 2028ರಲ್ಲೂ ಕಾಂಗ್ರೆಸ್ ಬರೋದು ಗ್ಯಾರಂಟಿ: ಸಿದ್ದರಾಮಯ್ಯ!
ಈ ಸಂಬಂಧ ಮಾತನಾಡಿದ ಅವರು, ಸಿಎಂ ಹೆಸರು ಹಾಳು ಮಾಡಲು ಕೇಂದ್ರ ಬಿಜೆಪಿ ಷಡ್ಯಂತ್ರ ಮಾಡುತ್ತಿದೆ. ತನಿಖಾ ಅಧಿಕಾರಿಗಳಿಗೆ ಕೇಂದ್ರ ಬಿಜೆಪಿ ಒತ್ತಡ ಹಾಕುತ್ತಿದೆ. ಇದರಲ್ಲಿ ಸಿಎಂ ಹೆಸರು ಹೇಳಿ ಎಂದು ಮುಡಾ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಾರೆ ಎಂದರು.
ತಪ್ಪು ಮಾಡಿದ್ರೆ ತಾನೇ ತಪ್ಪು ಅಂತ ಹೇಳೋದು. ನಮ್ಮ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ಮುಡಾ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಈಗಾಗಲೇ ಇ.ಡಿ ತನಿಖೆ ಮಾಡುತ್ತಿದೆ. ಮೊನ್ನೆ 300 ಕೋಟಿ ಎಂದು ಹೇಳಿದ್ದರು. ಸಿಎಂಗೂ ಅದಕ್ಕೂ ಸಂಬಂಧ ಇದ್ಯಾ? ಸುಖಾಸುಮ್ಮನೆ ಎಲ್ಲದಕ್ಕೂ ಸಿಎಂ ಹೆಸರು ತಳುಕು ಹಾಕೋದು ಸರಿಯಲ್ಲ. ಐಟಿ, ಇ.ಡಿ ಅಧಿಕಾರಿಗಳು ಬಿಜೆಪಿ ಪಕ್ಷದ ಕೈಗೊಂಬೆಗಳಾಗಿವೆ. ಹಿಂದೆ ಡಿಕೆಶಿ ವಿರುದ್ಧವೂ ಷಡ್ಯಂತ್ರ ಮಾಡಿದ್ದರು. ಬಿಜೆಪಿಯವರು ಪ್ರಜಾಪ್ರಭುತ್ವ ವಿರೋಧಿಗಳು. ವಿರೋಧಿಗಳನ್ನು ಮುಗಿಸುವ ಹುನ್ನಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ತಕ್ಕ ಉತ್ತರ ಕೊಟ್ಟು ಗಟ್ಟಿಯಾಗಿ ನಿಲ್ಲುತ್ತೇವೆ ಎಂದರು.