ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಗೆ ವಿಶೇಷ ವಾದ ಮಹತ್ವವಿದೆ. ಸಂಪತ್ತಿನ ದೇವತೆ ಎಂದರೆ ಲಕ್ಷ್ಮಿ ಎನ್ನಲಾಗುತ್ತದೆ. ಲಕ್ಷ್ಮಿ ದೇವಿಯ ಕೃಪೆ ಇದ್ದರೆ ಜೀವನದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲದೇ, ದೇವಿಯ ಕೃಪೆಯಿಂದ ಆರ್ಥಿಕವಾಗಿ ಲಾಭ ಸಹ ಆಗುತ್ತದೆ.
ನಾವು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುವುದಲ್ಲದೆ ಸಂಪತ್ತು ಕೂಡ ಬರುತ್ತದೆ. ಶುಕ್ರವಾರವನ್ನ ಲಕ್ಷ್ಮಿ ದೇವಿಯ ವಾರ ಎನ್ನಲಾಗುತ್ತದೆ. ಆ ದಿನ ದೇವಿಯ ಆರಾಧನೆ ಮಾಡಿದರೆ ನಮ್ಮ ಕನಸು ನನಸಾಗುತ್ತದೆ. ಆದರೆ ದೇವಿಯ ಆರಾಧನೆ ಮಾಡಲು ಸಹ ಒಂದು ವಿಧಾನವಿದೆ.
- ಲಕ್ಷ್ಮಿ ದೇವಿಯು ಶುದ್ಧವಾದ ಸ್ಥಳದಲ್ಲಿ ಮಾತ್ರ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ ಶುಕ್ರವಾರದಂದು ಮನೆಯ ಮುಂದೆ ಗುಡಿಸಿ ಸಾರಿಸಿ ರಂಗೋಲಿ ಹಾಕಿ, ಮನೆಯೊಳಗಡೆಯೂ ಸ್ವಚ್ಛಗೊಳಿಸಿ, ಪೂಜಾ ಸ್ಥಳವನ್ನು ಗಂಗಾಜಲದಿಂದ ಶುದ್ಧೀಕರಿಸಿ ಮತ್ತು ಲಕ್ಷ್ಮಿ ದೇವಿಗೆ ಪೂಜೆ ಮಾಡಿ.
- ಲಕ್ಷ್ಮಿ ದೇವಿಯು ಸಮುದ್ರದಿಂದ ಜನಿಸಿದಳು ಎಂದು ಹಿಂದೂಗಳು ನಂಬುತ್ತಾರೆ. ಆದ್ದರಿಂದ ಅವಳು ಬಿಳಿ ಬಣ್ಣವನ್ನು ಇಷ್ಟಪಡುತ್ತಾಳೆ. ಹಾಗಾಗಿ ಶುಕ್ರವಾರದಂದು ಬಿಳಿ ಬಟ್ಟೆಯನ್ನು ಧರಿಸುವುದು ಮಾತ್ರವಲ್ಲದೆ ಹಾಲಿನಿಂದ ಮಾಡಿದ ಆಹಾರವು ದೇವಿಯ ಕೃಪೆಗೆ ಉತ್ತಮವಾಗಿದೆ.
- ಕೇಸರಿ ಹೂವು, ಅಕ್ಕಿಯೊಂದಿಗೆ ಪಾಯಸವನ್ನು ಲಕ್ಷ್ಮಿ ದೇವಿಗೆ ಅರ್ಪಿಸಬಹುದು. ಇವುಗಳನ್ನು ದೇವಿಗೆ ಅರ್ಪಿಸಲು ಸಾಧ್ಯವಾಗದಿದ್ದರೆ ಬೆಣ್ಣೆ, ಹಾಲು ಮತ್ತು ಶ್ರೀ ಫಲವನ್ನು ಅರ್ಪಿಸಬಹುದು.
- ತುಳಸಿ ಗಿಡವನ್ನು ಪೂಜಿಸುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ನಂಬಲಾಗುತ್ತದೆ. ನಿಯಮಗಳ ಪ್ರಕಾರ ಶುಕ್ರವಾರದಂದು ತುಳಸಿ ಗಿಡ ಮತ್ತು ಸಾಲಿಗ್ರಾಮಗಳನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ತುಂಬಾ ಸಂತೋಷವಾಗುತ್ತದೆ ಮತ್ತು ಬಯಸಿದ ವರವನ್ನು ನೀಡುತ್ತಾಳೆ. ತುಳಸಿ ಗಿಡದ ಬಳಿ ಬೆಳಗ್ಗೆ ಮತ್ತು ಸಂಜೆ ತುಪ್ಪದ ದೀಪವನ್ನು ಹಚ್ಚಬೇಕು.
- ಶುಕ್ರವಾರದಂದು ಮಹಿಳೆಯರು ತಮ್ಮ ಪಾದಗಳಿಗೆ ಕುಂಕುಮ ಮತ್ತು ಅರಿಶಿನವನ್ನು ಹಚ್ಚಿಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಸಂಪತ್ತು-ಸಮೃದ್ಧಿಯೊಂದಿಗೆ ನಿರಂತರ ಅದೃಷ್ಟವನ್ನು ಪಡೆಯುತ್ತಾನೆ.
- ಯಾವುದೇ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಬೇಡಿ. ಅದೇ ಸಮಯದಲ್ಲಿ ಮಕ್ಕಳು ಮತ್ತು ವೃದ್ಧರ ಹೃದಯವನ್ನು ನೋಯಿಸಬೇಡಿ. ಹೀಗೆ ಮಾಡುವವರ ಬಗ್ಗೆ ಲಕ್ಷ್ಮಿ ದೇವಿಯು ಅಸಮಾಧಾನಗೊಳ್ಳುತ್ತಾಳೆ. ಅಂತಹ ಜನರು ಯಾವಾಗಲೂ ಬಳಲುತ್ತಾರೆ ಎಂದು ನಂಬಲಾಗಿದೆ. ಈ ದಿನದಂದು ಭಗವಾನ್ ಲಕ್ಷ್ಮೀನಾರಾಯಣ ರೂಪವನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.