ಬೆಂಗಳೂರು: ಮಂಗಳೂರು ದರೋಡೆ ಕೇಸ್ ಆರೋಪಿಗಳನ್ನು ಬೇಗ ಅರೆಸ್ಟ್ ಮಾಡುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಂಗಳೂರು ದರೋಡೆ ಕೇಸ್ನಲ್ಲಿ 6 ಜನರು ಇದ್ದಾರೆ ಎಂದು ಮಾಹಿತಿ ಇತ್ತು.
ಈಗಾಗಲೇ 3 ಜನರ ಬಂಧನ ಮಾಡಲಾಗಿದೆ. 10-12 ಕೋಟಿ ಹಣ ಮತ್ತು ಬಂಗಾರವನ್ನು ರಿಕವರಿ ಮಾಡಿದ್ದೇವೆ. ಉಳಿದವರ ಹುಡುಕಾಟಕ್ಕೆ ತನಿಖೆ ನಡೆಯುತ್ತಿದೆ. ಅವರ ಲೊಕೇಶನ್ ಕೂಡ ಪತ್ತೆ ಹಚ್ಚಲಾಗಿದೆ. ಅವರನ್ನು ಬೇಗ ಅರೆಸ್ಟ್ ಮಾಡುತ್ತೇವೆ ಎಂದು ತಿಳಿಸಿದರು.
Whatsapp ನಲ್ಲಿ ಬಂದ Voice message ಅನ್ನು ಅಕ್ಷರ ರೂಪಕ್ಕೆ ಬದಲಾಯಿಸುವುದು ಹೇಗೆ ಗೊತ್ತಾ..?
ಕರ್ನಾಟಕ ದರೋಡೆ ರಾಜ್ಯ ಆಗುತ್ತಿದೆ ಎಂಬ ಬಿಜೆಪಿ ಮತ್ತು ವಿಪಕ್ಷ ನಾಯಕ ಅಶೋಕ್ ಆರೋಪದ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಅವರ ಕಾಲದಲ್ಲಿ ಯಾವ ರಾಜ್ಯ ಇತ್ತು. ಅವರ ಸರ್ಕಾರದಲ್ಲಿ ಯಾವ ರಾಜ್ಯ ಇತ್ತು ಎಂದು ಅಂಕಿಅಂಶಗಳ ಸಮೇತ ಹೇಳುತ್ತೇನೆ. ಅವರು ಹೇಳೋದು ಹೇಳಲಿ. ಅವರ ಕಾಲದಲ್ಲಿ ಯಾವ ರಾಜ್ಯ ಇತ್ತು ಎಂದು ಸಮಯ ಬಂದಾಗ ಅಂಕಿಅಂಶಗಳ ಸಮೇತ ಹೇಳುತ್ತೇನೆ ಎಂದು ಟಾಂಗ್ ಕೊಟ್ಟರು.