ಬಳ್ಳಾರಿ : ಪಕ್ಷದ ಕೆಲ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದ ಶ್ರೀರಾಮುಲು ಮನವೊಲಿಕೆಗೆ ಹೈಕಮಾಂಡ್ ಮುಂದಾಗಿದೆ. ನಿನ್ನೆ ಬೆಂಗಳೂರು ಘಟನೆಯ ಬಗ್ಗೆ ಮಾಹಿತಿ ಪಡೆದು ಸಮಾಧಾನಪಡಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಇದೀಗ ಮತ್ತೆ ರಾಮುಲು ಮನವೊಲಿಕೆಗೆ ಮುಂದಾಗಿದ್ದಾರೆ.
ಶ್ರೀರಾಮುಲು ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆಯೇ ಜೆಪಿನಡ್ಡಾ ರಾಮುಲುಗೆ ಕರೆ ಮಾಡಿದ್ದು, ದೆಹಲಿಗೆ ಬನ್ನಿ ಕೂತು ಮಾತಾಡೋಣ ಎಂದಿದ್ದಾರೆ. ಈ ವೇಳೆ ರಾಮುಲು ಕೋರ್ ಕಮಿಟಿ ಸಭೆಯಲ್ಲಿ ಆಗಿದ್ದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ತಮಗಾದ ಅವಮಾನದ ಬಗ್ಗೆ ವಿವರಣೆ ನೀಡಿದ್ದಾರೆ. ಅದಕ್ಕೆ ಜೆಪಿನಡ್ಡಾ, ದೆಹಲಿಗೆ ಬನ್ನಿ ಕೂತು ಮಾತಾಡೋಣ, ಯಾವುದೇ ಆತುರದ ನಿರ್ಧಾರ ಮಾಡಬೇಡಿ, ಪಕ್ಷ ಬಿಡುವ ಬಗ್ಗೆ, ಪಕ್ಷದ ವಿರುದ್ದ ಏನೂ ಮಾತನಾಡಬೇಡಿ ಎಂದು ಕಿವಿಮಾತು ಹೇಳಿದ್ದು, ಶ್ರೀರಾಮುಲು ನಡ್ಡಾ ಮಾತಿಗೆ ತಲೆಯಾಡಿಸಿ ಓಕೆ ಎಂದು ಸೈಲೆಂಟಾಗಿದ್ಧಾರೆ.