ಬೆಂಗಳೂರು: ಬಿಜೆಪಿಯವರು ಆರೋಪ ಮಾಡ್ತಾನೆ ಇರುತ್ತಾರೆ, ಅದಕ್ಕೆಲ್ಲ ಉತ್ತರ ಕೊಡೋಕೆ ಅಗೊಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಆರೋಪ ಮಾಡ್ತಾನೆ ಇರುತ್ತಾರೆ. ಅವರ ಆರೋಪಗಳಿಗೆ ಉತ್ತರ ಕೊಡೋಕೆ ಅಗೊಲ್ಲ. ಕಾನೂನು ಪ್ರಕಾರ ಏನು ಕ್ರಮ ಆಗಬೇಕೋ ಆಗುತ್ತೆ ಎಂದು ಹೇಳಿದ್ದಾರೆ.
Whatsapp ನಲ್ಲಿ ಬಂದ Voice message ಅನ್ನು ಅಕ್ಷರ ರೂಪಕ್ಕೆ ಬದಲಾಯಿಸುವುದು ಹೇಗೆ ಗೊತ್ತಾ..?
ಪ್ರಕರಣ ಗೊತ್ತಾದ ಮೇಲೆ ನಮ್ಮ ಪೊಲೀಸರು ಅಲ್ಲಿಗೆ ಹೋಗಿದ್ರು. ನಾವು ಹೋಗೋ ಹೊತ್ತಿಗೆ ಗಾಡಿ ಅಲ್ಲಿಂದ ಬೇರೆಡೆ ಸ್ಥಳಾಂತರ ಮಾಡಿದ್ದರು. ಲಕ್ಷ್ಮಿಯವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಅಪಘಾತ ಕೇಸ್ನಲ್ಲಿ ವಾಹನ ಸಾಗಾಟ ಮಾಡೋ ಹಾಗೇ ಇಲ್ಲ. ಆದರೆ ಇಲ್ಲಿ ಮಾಡಿದ್ದಾರೆ. ಯಾಕೆ ಮಾಡಿದ್ದಾರೆ ಎಂದು ಪೊಲೀಸರು ತನಿಖೆ ಮಾಡ್ತಾರೆ. ಸಚಿವರು ಕಾರಿನಲ್ಲಿ ಇದ್ದರು ಅಂತ ಇಷ್ಟು ಸುದ್ದಿ ಆಗಿದೆ ಅಷ್ಟೆ ಎಂದಿದ್ದಾರೆ.