ಪನಾಮಾ ಸಿಟಿ : ಪನಾಮಾ ಕಾಲುವೆಯು ಅಮೆರಿಕದಿಂದ ಉಡುಗೊರೆ ಬಂದಿಲ್ಲ. ಅದು ಪನಾಮಾದ ಬಳಿಯೇ ಉಳಿಯುತ್ತದೆ ಎಂದು ಪನಾಮಾ ಅಧ್ಯಕ್ಷ ಜೋಸ್ ರೌಲ್ ಮುಲಿನೊ ಹೇಳಿದ್ದಾರೆ.
ಕಾಲುವೆಯನ್ನು ನಾವು ಪನಾಮಾಕ್ಕೆ ನೀಡಿದ್ದೆವು. ಈಗ ಅದನ್ನು ವಾಪಾಸು ಪಡೆಯುತ್ತೇವೆ‘ ಎಂಬ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಲಿನೊ ` ಟ್ರಂಪ್ ಹೇಳಿದ ಎಲ್ಲವನ್ನೂ ನಾವು ತಿರಸ್ಕರಿಸುತ್ತೇವೆ. ಪನಾಮಾ ಕಾಲುವೆ ಅಮೆರಿಕದಿಂದ ಬಂದ ಕೊಡುಗೆ ಅಥವಾ ಉಡುಗೊರೆಯಲ್ಲ. ಅದು ಪನಾಮಾಕ್ಕೆ ಸೇರಿದ್ದು‘.ಹಾಗಾಗಿ ಅದು ಪನಾಮಾದ ಬಳಿಯೇ ಉಳಿಯಲಿದೆ ಎಂದು ಜೋಸ್ ರೌಲ್ ಮುಲಿನೊ ಹೇಳಿದ್ದಾರೆ.
ಪನಾಮಾ ಕಾಲುವೆಯನ್ನು ಚೀನಾ ನಿರ್ವಹಿಸುತ್ತಿದೆ ಎಂಬ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯ `ಕಾಲುವೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಚೀನಾ ಭಾಗವಹಿಸುವುದಿಲ್ಲ ಮತ್ತು ಕಾಲುವೆಯ ವ್ಯವಹಾರಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ‘ ಎಂದು ಸ್ಪಷ್ಟನೆ ನೀಡಿದೆ.