ಬಾಗಲಕೋಟೆ: ವಿಪರೀತ ಸಾಲಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮುಧೋಳ ನಗರದ ಯಾದವಾಡ ಬ್ರಿಡ್ಜ್ ನಲ್ಲಿ ನಡೆದಿದೆ. ಮುಧೋಳ ನಗರದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಾದವಾಡ ಬ್ರಿಡ್ಜ್ನಲ್ಲಿ ನೇಣುಹಾಕಿಕೊಂಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತಃ ಸೊರಗಾವಿಯ ಮಲ್ಲಪ್ಪ ಲಾಳಿ (೫೬), ಮಹಾದೇವಿ (೫೧) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. 15 ವರ್ಷಗಳ ಹಿಂದೆ ಮೆಟಗುಡ್ಡ ಗ್ರಾಮಕ್ಕೆ ಜೀವನ ನಡೆಸುತ್ತಿದ್ದರು. ಮೆಟಗುಡ್ಡ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಅತಿಯಾದ ಸಾಲವೇ ಆತ್ಮಹತ್ಯೆ ಕಾರಣ ಎನ್ನಲಾಗುತ್ತಿದೆ. ಇಬ್ಬರು ಹೆಣ್ಣು ಮಕ್ಕಳ ಮದುವೆಗಾಗಿ ಖಾಸಗಿ ವ್ಯಕ್ತಿಗಳು, ಫೈನಾನ್ಸ್ ಗಳಲ್ಲಿ ಸಾಲ ಮಾಡಿದ್ದರು. ಆದರೆ ಸಾಲ ತೀರಿಸಲಾಗದೇ ಸ್ಥಳದಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.