ಬೆಳಗಾವಿ: 4 ವರ್ಷದ ಕಂದಮ್ಮನನ್ನು ಕೊಂದಿದ್ದ ಪಾಪಿ ಮಲತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸರು ಆರೋಪಿ ಮಲತಾಯಿ ಸಪ್ನಾ ನಾವಿಯನ್ನು ಬಂಧಿಸಿದ್ದಾರೆ. 2024 ಮೇ ತಿಂಗಳಲ್ಲಿ 4 ವರ್ಷ ಮಗು ಸಮೃದ್ಧಿ ರಾಯಣ್ಣ ನಾವಿ ಸಾವನ್ನಪ್ಪಿದ್ದಳು. ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಅಸಹಜ ಕೇಸ್ ದಾಖಲಾಗಿತ್ತು. ಸಮೃದ್ಧಿ ಹೆತ್ತ ತಾಯಿಯ ಸಾವಿನಂತರ ರಾಯಣ್ಣ ಎರಡನೇ ಮದುವೆಯಾಗಿದ್ದನು. ಆದರೆ ಮಲತಾಯಿ ಬಡಿದು ಕೊಂದಿದ್ದಾಳೆ ಎಂದು ಮಗುವಿನ ಅಜ್ಜ ಅಜ್ಜಿ ಆರೋಪಿಸಿದ್ದರು. ಮೃತಪಟ್ಟ ಮಗುವನ್ನು ಪೊಲೀಸರು ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮಲತಾಯಿ ಅಸಲಿ ಬಣ್ಣ ಬಯಲಾಗಿತ್ತು.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಗುವಿನ ಹೊಟ್ಟೆಗೆ ಬಡೆಯಲಾಗಿದೆ ಅಂತಾ ಸಾಬೀತಾಗಿದೆ. ಮರಣೋತ್ತರ ಪರೀಕ್ಷೆ ಬಂದ ತಕ್ಷಣವೇ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡರು. 2024ರ ಸೆಪ್ಟೆಂಬರ್ ತಿಂಗಳಲ್ಲಿ ಕೊಲೆ ದಾಖಲಿಸಿದ್ದರು. ಆದರೆ ಅಸಹಜ ಸಾವು ಕೇಸ್ ದಾಖಲಾದಾಗಲೇ ಮಲತಾಯಿ ಸಪ್ನಾ ನಾವಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಳು. ಬಳಿಕ ಪೊಲೀಸರು ನಿರೀಕ್ಷಣಾ ಜಾಮೀನು ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಜಾಮೀನು ರದ್ದು ಆಗುತ್ತಿದ್ದಂತೆ ಆರೋಪಿ ಮಲತಾಯಿ ಸಪ್ನಾಳನ್ನು ಪೊಲೀಸರು ಬಂಧಿಸಿದ್ದಾರೆ.