ಆತ ಅಕ್ಕನ ಮಗಳನ್ನು ಕಾಲೇಜಿನಿಂದ ಕರೆತರಲು ಹೋಗಿದ್ದ , ಕಾಲೇಜು ಸಮೀಪವೇ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಲು ನಿಲ್ಲಿಸಿದ್ದ ಇದನ್ನ ವಂಚು ಹಾಕ್ಕಿದ್ದ ಗಾಂಜಾ ಬಾಯ್ಸ್ ಆತನನ್ನ ಕಿಡ್ನಾಪ್ ಮಾಡಿದ್ದಾರೆ ಅದು ಮಾತ್ರವಲ್ಲದೆ ಅತನ ಬಳಿ ಮೊಬೈಲ್ ಹಣ ಪಿಕಿ ಬೆತ್ತಲೆ ಗೊಳಿಸಿ ವಿಕೃತ ಮೆರೆದಿದ್ದಾರೆ. ಹೀಗೆ ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡುತ್ತಿರುವ ವ್ಯಕ್ತಿಯ ಹೆಸರು ಮುರಳಿ ಅಂತ ಆನೇಕಲ್ ಪಟ್ಟಣದ ಮುತ್ತುಗಟ್ಟೆ ಕುವೆಂಪು ನಗರದ ನಿವಾಸಿ ತನ್ನ ಅಕ್ಕನ ಮಗಳನ್ನು ಕರೆತರಲು
ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿರುವ ಕಾವೇರಿ ಕಾಲೇಜು ಸಮೀಪ ಹೋಗಿದ್ದನಂತೆ ಮೂತ್ರ ವಿಸರ್ಜನೆ ಮಾಡಲು ಬೈಕ್ ನಿಲ್ಸಿದಂತೆ ಅಷ್ಟೊತ್ತಿಗೆ ಗಾಂಜಾ ವ್ಯಸನಿಗಳ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ. NGO ಒಂದರಲ್ಲಿ ಕೆಲಸ ಮಾಡುತ್ತಿದ್ದ ಮುರಳಿ ಎಂಬಾತನನ್ನು ಕಿಡ್ನಾಪ್ ಮಾಡಿರೋ ಗ್ಯಾಂಗ್, ಬಳಿಕ ಆತನ ಮೇಲೆ ಮನಸ್ಸೋ ಇಚ್ಛೆ ಥಳಿಸಿದೆ. ಬಳಿಕ ಆತನ ಡಿಯೋ ಬೈಕ್ ಮತ್ತು ಮೊಬೈಲ್ ಕದ್ದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.
ಗುರುವಾರ ಈ ಕೆಲಸಗಳನ್ನು ಮಾಡಿದರೆ ನಿಮಗೆ ಸಂತೋಷ, ಸಮೃದ್ಧಿ ಪ್ರಾಪ್ತಿಯಾಗುತ್ತೆ.!
ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಗ್ಯಾಂಗ್, ಮುರಳಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದೆ. ಹಣ ನೀಡುವಂತೆ ಮುರಳಿ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಗಾಂಜಾ ಸೇದುತ್ತಾ, ಎಣ್ಣೆ ಹಾಕುತ್ತ ಯುವಕನಿಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಬಳಿಕ ಮೊಬೈಲ್ ಕಿತ್ತುಕೊಂಡು, ಗೂಗಲ್ ಪೇನಲ್ಲಿ ಹಣ ಟ್ರಾನ್ಫಾರ್ ಮಾಡಿಸುವಂತೆ ಒತ್ತಾಯ ಮಾಡಿದ್ದಾರೆ.ಅಲ್ಲದೇ ಪೇನ್ನಲ್ಲಿ ಆತನ ಮೈತುಂಬಾ ಬರೆದು, ಮನಬಂದಂತೆ ಮೈಮೇಲೆ ಚುಚ್ಚಿ ಗಾಂಜಾ ಗ್ಯಾಂಗ್ ವಿಕೃತಿ ಮೆರೆದಿದ್ದಾರೆ ,
ಇನ್ನು ಮೈತುಂಬ ಸಿಕ್ಕ ಸಿಕ್ಕ ಕಡೆಗಳಲ್ಲಿ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಗ್ಯಾಂಗ್, ಬಳಿಕ ಡಿಯೋ ಬೈಕ್ ಮತ್ತು ಮೊಬೈಲ್ ಕದ್ದೊಯ್ದು ಎಸ್ಕೇಪ್ ಆಗಿದ್ದಾರೆ ..ಇನ್ನು ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯುವಕ ಮುರಳಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಈ ಘಟೆನ ಮಟ ಮಟ ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದ್ದು, ಸಂಜೆ ಏಳು ಗಂಟೆವೆರೆಗೆ ಮುರಳಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಬಳಿಕ ಚೇತರಿಸಿಕೊಂಡು ಮುಖ್ಯ ರಸ್ತೆಗೆ ನಡೆದು ಬಂದಿದ್ದಾನೆ.
ಇನ್ನು ಹಲ್ಲೆ ಗೊಳಗಾದ ವ್ಯಕ್ತಿಯನ್ನ ಸ್ಥಳೀಯರ ಸಹಾಯದಿಂದ ಆನೇಕಲ್ ಸರ್ಕಾರಿ ಆಸ್ಪತ್ರೆ ಹೋಗಿದ್ದು, ಚಿಕಿತ್ಸೆಗೆ ಒಳಗಾಗಿದ್ದಾನೆ. ಗಾಂಜಾ ಗ್ಯಾಂಗ್ ಹಲ್ಲೆಯಿಂದಾಗಿ ಮುರಳಿ ಕೈ ಮೂಳೆಗಳು ಮುರಿದು, ಗಂಭೀರವಾಗಿ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ..