ಗದಗ : ಉತ್ತರ ಕರ್ನಾಟಕದ ಜೀವನಾಡಿ ತುಂಗಭದ್ರಾ ನದಿಯ ನೀರು ಹಸಿರು ಬಣ್ಣ ತಿರುಗಿದ್ದು, ಸುತ್ತಮುತ್ತಲ ಗ್ರಾಮದ ಜನರನ್ನು ಆತಂಕಕ್ಕೀಡು ಮಾಡಿತ್ತು. ಇದರ ಕುರಿತು ಸಚಿವ ಎಚ್ಕೆ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಗಂಗಾಪುರ ಪ್ರದೇಶದಲ್ಲಿ ಹಸಿರು ನೀರು ಬರ್ತಿತ್ತು. ಅದು ಯಾಕೆ ಬರ್ತಿದೆ ಅಂತ ತನಿಖೆ ವೇಳೆ ಕೆಲವು ಅಂಶಗಳು ಗೊತ್ತಾಗಿವೆ. ಗಂಗಾಪುರ ಬಳಿಯ ಶುಗರ್ ಫ್ಯಾಕ್ಟರಿ ತ್ಯಾಜ್ಯ ನದಿಗೆ ಬಿಡುವುದರಿಂದ ಆಗಿರಬಹುದು ಎಂಬ ಆತಂಕ ಇದೆ. ಜಲ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಇಂದಲೂ ಆತಂಕ ಇದೆ. ಈ ಸಂ:ಬಂಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಸಹ ನೀಡಲಾಗಿದೆ. ಇಂದು ವಿಜಯನಗರ ಶುಗರ್ ಫ್ಯಾಕ್ಟರಿ ನವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿದ್ದು, ಶುಗರ್ ಫ್ಯಾಕ್ಟರಿ ತ್ಯಾಜ್ಯವನ್ನು ನದಿ, ಹಳ್ಳ, ಕಾಲುವೆಗೆ ಬಿಡದಂತೆ ತಾಕೀತು ಮಾಡಲಾಗಿದೆ. ಅವೈಜ್ಞಾನಿಕವಾಗಿ ತ್ಯಾಜ್ಯವನ್ನು ಬಿಡುವುದನ್ನು ನಿಲ್ಲಿಸಲು ಸೂಕ್ತ ಸೂಚನೆ ನೀಡಲಾಗಿದೆ ಎಂದರು.
ಇನ್ನೂ ಗದಗ ಬೆಟಗೇರಿ ಅವಳಿ ನಗರಕ್ಕೆ ಸಪ್ಲೇ ಆಗುವ ನೀರಿನ ಬಗ್ಗೆ ಆತಂಕ ಕುರಿತು ಮಾತನಾಡಿ, ಅವಳಿ ನಗರಕ್ಕೆ ಸಪ್ಲೇ ಆಗುವ ಶುದ್ಧೀಕರಣ ಘಟಕ ಬಳಿ ಕಲುಷಿತವಾಗಿಲ್ಲ. ಬ್ಯಾರೇಜ್ ಬಳಿ ಪಂಪ್ ಬಳಿ ಯಾವುದೇ ಅಶುದ್ಧ ನೀರು ಬರುತ್ತಿಲ್ಲ. ಜನ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಯಿಸಿ, ಆರಿಸಿ ಕುಡಿಯಿರಿ ಅಂತ ಮುನ್ಸೂಚನೆ ನೀಡಲಾಗಿದೆ. ನಗರಕ್ಕೆ ಬರುವ ನೀರು ಶುದ್ಧವಾಗಿದೆ. ಜನ ಆತಂಕ ಪಡುವ ಆತಂಕ ಇಲ್ಲ. ತುಂಗಭದ್ರಾ ನದಿಯಿಂದ ಗ್ರಾಮಗಳಿಗೆ ಸಪ್ಲೇ ಆಗುವ ಡಿಬಿಓಟಿ ನಲ್ಲೂ ನಿತ್ಯ ನೀರು ಪರೀಕ್ಷೆ ಮಾಡಲಾಗುತ್ತಿದೆ ಎಂದರು.