ಭಾರತೀಯ ಜಾಗತಿಕ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಲ್ಲಿರುವ ಸಾಧನಗಳೆಂದರೆ ಸ್ಮಾರ್ಟ್ಫೋನ್ಗಳು. ಇದೀಗ ಹೊಸ ವರ್ಷ ಬಂದಾಯ್ತು. ಹೊಸವರ್ಷದಲ್ಲಿ ಹಲವಾರು ಸ್ಮಾರ್ಟ್ಫೋನ್ಗಳು, ಗ್ಯಾಜೆಟ್ಗಳು ಬಿಡುಗಡೆಯಾಗುತ್ತಿದೆ. ಆದರೆ ಇವೆಲ್ಲವೂ ಅವಗಳದ್ದೇ ಆದ ಫೀಚರ್ಸ್ಗಳೊಂದಿಗೆ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಜನಪ್ರಿಯ ಮೊಬೈಲ್ ಕಂಪನಿಯಾಗಿರುವ ವಿವೋ ಮಾರುಕಟ್ಟೆಗೆ ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಹೌದು ವಿವೋ ಕಂಪನಿಯ Y300 5G ಸ್ಮಾರ್ಟ್ಪೋನ್ ಮೇಲೆ ಬರೋಬ್ಬರಿ 7,000 ರೂಪಾಯಿವರೆಗೂ ಡಿಸ್ಕೌಂಟ್ ನೀಡಲಾಗುತ್ತಿದೆ.
ವಿವೋ Y300 5G ಸ್ಮಾರ್ಟ್ಫೋನ್ 6.67 ಇಂಚಿನ ಹೆಚ್ಡಿ ಪ್ಲಸ್ ಸ್ಮಾರ್ಟ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರ ಜೊತೆಯಲ್ಲಿ Y300 5G ಮಾಡೆಲ್ 2400 * 1080 ಪಿಕ್ಸೆಲ್ ರೆಸ್ಯೂಲೇಷನ್ ಹೊಂದಿದೆ. ಈ ಸ್ಮಾರ್ಟ್ಫೋನ್ 120 Hz ರಿಫ್ರೇಶ್ ರೇಟ್ ಮತ್ತು 1800 nits ಬ್ರೈಟ್ನೆಸ್ನೊಂದಿಗೆ ಸಿಗಲಿದೆ. 4 Gen 2 ಆಕ್ಟಾ ಕೋರ್ ಪ್ರೊಸೆಸರ್, ಸ್ಮಾರ್ಟ್ಫೋನ್ ಅಂಡ್ರಾಯ್ಡ್ v14 ಆಪರೇಟಿಂಗ್ ಸಿಸ್ಟಮ್ ಹೊಂದಿದೆ.
Camera: ವಿವೋ Y300 5G ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ನಲ್ಲಿ ಲಭ್ಯವಿದೆ. ಪ್ರೈಮರಿ ಆಂಗಲ್ ಕ್ಯಾಮೆರಾ 50MP ಮತ್ತು 2MP ಸೆನ್ಸರ್ ಕ್ಯಾಮೆರಾ ಒಳಗೊಂಡಿದೆ. ಇನ್ನು ಸೆಲ್ಫಿ ಪ್ರಿಯರಿಗಾಗಿ ಫ್ರಂಟ್ ಕ್ಯಾಮೆರಾ 32MP ನೀಡಲಾಗಿದೆ. ಸೆಲ್ಪಿ ಫೋಟೋ ಮತ್ತು ವಿಡಿಯೋ ಕಾಲ್ ಸಹ ಗುಣಮಟ್ಟದ ಚಿತ್ರವನ್ನು ಈ ಸ್ಮಾರ್ಟ್ಫೋನ್ ನೀಡುತ್ತದೆ.
Storage And Battery: ವಿವೋ Y300 5G ಸ್ಮಾರ್ಟ್ಫೋನ್ 8 GB RAM ಮತ್ತು 128 GB ROM ಹೊಂದಿದ್ದು, 2 TB ವರೆಗೂ ಎಕ್ಸಾಪಾಂಡ್ ಮಾಡುವ ಆಯ್ಕೆಗಳಿವೆ. ಇನ್ನು 5000 mAh ಪವರ್ಫುಲ್ ಬ್ಯಾಟರಿ ಜೊತೆಗೆ 80 ವ್ಯಾಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
ಭಾರತದ ಮಾರುಕಟ್ಟೆಯಲ್ಲಿ ವಿವೋ ಕಂಪನಿಯ Y300 5G ಸ್ಮಾರ್ಟ್ಪೋನ್ ಮೂಲಬೆಲೆ 26,999 ರೂಪಾಯಿ ಆಗಿದೆ. ಆದ್ರೆ ಫ್ಲಿಪ್ಕಾರ್ಟ್ ಪ್ಲಾಟ್ಫಾರಂ ಮೇಲೆ 7,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಗ್ರಾಹಕರು ಈ ಡಿಸ್ಕೌಂಟ್ ಆಫರ್ನಿಂದ ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ ಖರೀದಿ ಮಾಡಬಹುದಾಗಿದೆ. ಡಿಸ್ಕೌಂಟ್ ಬಳಿಕ Y300 5G ಸ್ಮಾರ್ಟ್ಪೋನ್ 21,200 ರೂಪಾಯಿಗೆ ಸಿಗುತ್ತದೆ.