ನಾಯಿ ವಿಚಾರಕ್ಕೆ ಕೊಲೆಯಾಗಿತ್ತು ಎನ್ನಲಾದ ರೌಡಿ ಶೀಟರ್ ಕೊಲೆ ಆರೋಪಿಯನ್ನ ಬಾಗಲೂರು ಪೊಲೀಸ್ರು ವಾಘ ಬಾರ್ಡರ್ ನಲ್ಲಿ ಬಂಧಿಸಿದ್ದಾರೆ. ಇಷ್ಟಕ್ಕೂ ಕೊಲೆ ನಡೆದಿದ್ದ ನಾಯಿ ವಿಚಾರಕ್ಕಾ ಅನ್ನೋ ಪೊಲೀಸ್ರ ಪ್ರಶ್ನೆಗೆ ಬೇರೆ ಉತ್ತರವೇ ಸಿಕ್ಕಿದೆ. ಇದೇ ತಿಂಗಳು 12ನೇ ತಾರೀಖೂ ರೌಡಿ ಶೀಟರ್ ಗುಣನನ್ನ ಶೂಟ್ ಮಾಡಿ ಕೊಲೆ ಮಾಡಿ ಆತ ಶವ ತೆಗೆದುಕೊಂಡು ಹೋಗಿ ತಮಿಳುನಾಡಿನಲ್ಲಿ ಸುಟ್ಟಿಹಾಕಿ ಬಂದಿದ್ರು.
ಇಬ್ಬರು ಕೂಡ ರೌಡಿ ಶೀಟರ್ ಗಳೇ ಇಬ್ಬರ ನಡುವೆ ಉಂಟಾದ ಹಣಕಾಸಿನ ವೈಮನಸ್ಸು ಕೊಲೆಯಲ್ಲಿ ಅಂತ್ಯವಾಗಿದೆ.ಬಾಗಲೂರು ಬಳಿಯ ಪ್ರೆಸ್ಟೀಜ್ ಅಪಾರ್ಟ್ನೆಂಟ್ ಒಳಗೆ ಸದ್ದಿಲ್ಲದೆ ಅಕ್ಕಪಕ್ಕದವರಿಗೆ ಬುಲೆಟ್ ಶಬ್ದ ಕೇಳಿಸದ ಹಾಗೇ ರೌಡಿ ಶೀಟರ್ ಗುಣ ನನ್ನ ಆತನೇ ಸ್ನೇಹಿತ ಬ್ರಿಜೇಶ್ ಕೊಲೆ ಮಾಡಿದ್ದ. ಮನೆಯವರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ತನಿಖೆ ಮಾಡಿದ ಬಳಿಕವೇ ಗೊತ್ತಾಗಿದ್ದು ಗುಣ ಕೊಲೆಯಾಗಿದ್ದಾನೆ ಎಂದು.
ಸಂಪಿಗೆಹಳ್ಳಿ ರೌಡಿಶೀಟರ್ ಗುಣ ಅಲಿಯಾಸ್ ಜಲಕ್ ನ ರಕ್ತ. ಜನವರಿ 12 ರಂದು ರೌಡಿ ಗುಣನನ್ನು ಭಾರತಿನಗರ ರೌಡಿಶೀಟರ್ ಬ್ರಿಜೇಶ್ ಮಾತನಾಡಬೇಕು ಅಂತ ತನ್ನ ಬಾಗಲೂರು ಬಳಿಯ ಅಪಾರ್ಟ್ನೆಂಟ್ ಗೆ ಗುಣನನ್ನ ಕರೆಸಿದ್ದಾನೆ. ಕರೆಸಿದ ಕೆಲವೇ ನಿಮಿಷಗಳಲ್ಲಿ ತನ್ನ ಬಳಿಯ ಪಿಸ್ತೂಲ್ ನಿಂದ ಎರಡು ಸುತ್ತು ಗುಣನ ಮೇಲೆ ಫೈರ್ ಮಾಡಿದ್ದಾನೆ.
ನಂತರ ಹರಿತವಾದ ಆಯುದದಿಂದ ಹಲ್ಲೆ ಮಾಡಿದ್ದಾನೆ. ಯಾವಾಗ ಗುಂಡು ಎದೆಗ ಬಿತ್ತೋ ಗುಂಡು ಬಿದ್ದ ಪೋರ್ಸ್ ಗೆ ಗುಣ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಬಾಡಿ ಇಲ್ಲೇ ಇದ್ರೆ ಕಷ್ಟ ಅಂತೇಳಿ ಬ್ರಿಜೇಶ್ ತನ್ನ ಸಹಚರನ್ನು ಕರೆಸಿಕೊಂಡು ಕಾರಿನಲ್ಲಿ ಬಾಡಿಯನ್ನು ತಮಿಳುನಾಡಿನ ಹೊಗನೇಕಲ್ ಬಳಿಯ ಪೆನ್ನಾಗರಂನ ನಿರ್ಜನ ಪ್ರದೇಶಕ್ಕೆ ತಗೊಂಡು ಹೋಗಿ ಅಲ್ಲಿ ಸುಟ್ಟು ಹಾಕಿದ್ದು, ಬಳಿಕ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಗುರುವಾರ ಈ ಕೆಲಸಗಳನ್ನು ಮಾಡಿದರೆ ನಿಮಗೆ ಸಂತೋಷ, ಸಮೃದ್ಧಿ ಪ್ರಾಪ್ತಿಯಾಗುತ್ತೆ.!
ಇನ್ನೂ ಕೊಲೆಗೆ ಕಾರಣ ಮೊದಲಿಗೆ ನಾಯಿ ಖರೀದಿ ಮಾಡಿದ ಹಣ ನೀಡಿಲ್ಲ ಅಂತ ತಿಳಿದುಕೊಂಡಿದ್ರು. ಆದ್ರೆ ಪೊಲೀಸ್ರ ತನಿಖೆಯಲ್ಲಿ ಗೋಲ್ಡ್ ಸ್ಮಗ್ಲಿಂಗ್ ವಾಸನೆ ಹೊರಬಿದ್ದಿದೆ. ವಾಘ ಗಡಿಯಲ್ಲಿ ಆರೋಪಿ ಬ್ರಿಜೇಶ್ ನ ಬಾಗಲೂರು ಪೊಲೀಸರು ಬಂಧಿಸಿದ ಮೇಲೆ ಅಸಲಿ ಸತ್ಯ ಹೊರ ಬಿದ್ದಿದೆ. ಅಮೃತಸರದಲ್ಲಿ ಬ್ರಿಜೇಶ ನ ಬಂಧಿಸಲಾಗಿದೆ. ಪಂಜಾಬ್ ನಲ್ಲಿ ಆರೋಪಿ ಬ್ರಿಜೇಶ್ ಅರ್ಧ ಬೆಲೆಗೆ ಚಿನ್ನ ತಂದು ಅದನ್ನು ಇಲ್ಲಿ ಮಾರಾಟ ಮಾಡ್ತಿದ್ನಂತೆ. ಚಿನ್ನ ಮಾರಾಟ ಮಾಡಲು ಕೊಲೆಯಾದ ಗುಣನನ್ನ ಬಳಸಿಕೊಳ್ಳುತ್ತಿದ್ನಂತೆ.
ದಂಧೆ ಶುರುಮಾಡಿದ್ದ ದಿನದಿಂದ ಕೊಲೆಯಾದ ಗುಣ ಹೆಸರಿನಲ್ಲೇ ಚಿನ್ನ ಮಾರಾಟ ಮಾಡುತ್ತಿದ್ನಂತೆ ಬ್ರಜೇಶ್. 1ಗ್ರಾಂ ಗೋಲ್ಡ್ ಗೆ ಸುಮಾರು 1ರಿಂದ 2 ಸಾವಿರದಷ್ಟು ಲಾಭ ಪಡೆಯುತ್ತಿದ್ನಂತೆ ಬ್ರಿಜೇಶ್. ಆದರೆ ಲಾಭದ ಹಣ ಮಾತ್ರ ಗುಣ ಗೆ ಸರಿಯಾಗಿ ಕೊಡುತ್ತಿರಲಿಲ್ಲ.ವಹೀಗಾಗಿ ಇಬ್ಬರ ನಡುವೆ ಕಿರಿಕ್ ಆಗಿತ್ತಂತೆ. ಈ ವೇಳೆ ಬ್ರಿಜೇಶ್ ತಂಗಿ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಂಡು ಓಡಾಡಿದ್ದ ಗುಣ. ಜೊತೆಗೆ ಹಲವರಿಗೆ ಚಿನ್ನದ ಮಾಫಿಯಾ ಬಗ್ಗೆ ಕೂಡ ಹೇಳಿಕೊಂಡಿದ್ದಾನೆ. ಈ ಎಲ್ಲಾ ಕಾರಣಗಳಿಂದ ಕೋಪಗೊಂಡು ಅಪಾರ್ಟ್ ಮೆಂಟ್ ಗೆ ಕರೆಸಿ ಬ್ರಿಜೇಶದ ಕೊಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಕೊಲೆಯ ಬಳಿಕ ಆರೋಪಿ ಮತ್ತೆ ಗೋಲ್ಡ್ ಖರೀದಿಸಲು ಅಮೃತಸರಕ್ಕೆ ತೆರಳಿದ್ದ ವೇಳೆ ಪೊಲೀಸ್ರ ಕೈಗೆ ಲಾಕ್ ಆಗಿದ್ದಾನೆ.