ಕೋಲಾರ : ಸಮಾಜದ ಸ್ವಾಸ್ಥ್ಯದ ಜೊತೆಗೆ ಆರೋಗ್ಯ ಶಿಕ್ಷಣ ಕ್ಷೇತ್ರದ ಏಳಿಗೆಗಾಗಿ ಶ್ರಮಿಸುವ ನಿಟ್ಟಿನಲ್ಲಿ ಕೈಜೋಡಿಸುವ ಸಮಾನಮನಸ್ಕರ ಜೊತೆಯಲ್ಲಿ ಜೆಡಿಯು ಪಕ್ಷವನ್ನು ರಾಜ್ಯಾದ್ಯಂತ ಬಲಪಡಿಸುವುದಾಗಿ ಪಕ್ಷದ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಹಿಮಾ ಜೆ ಪಾಟೀಲ್ ತಿಳಿಸಿದರು.
ಚಾಲಕರೇ ಹುಷಾರ್: ಆಟೋ ಮೇಲೆ ಈ ರೀತಿ ಪೋಸ್ಟರ್ ಹಾಕಿದ್ರೆ ಬೀಳುತ್ತೆ ದಂಡ, ಸೀಜ್ ಆಗುತ್ತೆ ವಾಹನ!
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇವತ್ತಿನ ರಾಜಕಾರಣವು ದಂಧೆಯಾಗಿದೆ ಕೇವಲ ವ್ಯಾಪಾರದ ಮನಸ್ಥಿತಿಯಾಗಿ ಬಿಟ್ಟಿದೆ ಜನರ ಸಮಸ್ಯೆಗಳಿಗೆ ಒತ್ತು ನೀಡಿಲ್ಲ ಜೆಡಿಯು ಪಕ್ಷವು ಶಿಕ್ಷಣ, ಆರೋಗ್ಯ, ಪರಿಸರ, ಕೃಷಿ ಸೇರಿದಂತೆ ಆಡಳಿತ ವ್ಯವಸ್ಥೆಯ ಸುಧಾರಣೆಗೆ ಅಧ್ಯತೆ ನೀಡಲಾಗುತ್ತಿದೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಬಗ್ಗೆ ಆರೋಪ ಪ್ರತ್ಯಾರೋಪಕ್ಕೆ ಸೀಮಿತವಾಗಬಾರದು ಬದಲಿ ವ್ಯವಸ್ಥೆಯಾಗಬೇಕು ರಾಜ್ಯದಾದ್ಯಂತ ಮಠಾಧೀಶರು, ಪದವೀಧರರು, ಪ್ರಗತಿಪರ ಚಿಂತಕರು, ಸಾಹಿತಿಗಳೊಂದಿಗೆ ಸಂವಹನದ ಮೂಲಕ ಬದಲಾವಣೆ ತರಲು ಮುಂದಾಗಿದ್ದೇವೆ ಎಂದು ತಿಳಿಸಿದರು.