ಆನೇಕಲ್:- ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಆನೇಕಲ್ನ ದೊಡ್ಡಹಾಗಡೆ ಗ್ರಾಮದಲ್ಲಿ ಜರುಗಿದೆ.
2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕಿಚ್ಚ ಸುದೀಪ್ ಅತ್ಯುತ್ತಮ ನಟ, ಅನುಪಮಾ ಗೌಡ ಅತ್ಯುತ್ತಮ ನಟಿ
ದೃಷ್ಟಿ ತೆಗೆದ ನೀರನ್ನ ರಸ್ತೆಗೆ ಹಾಕಲು ಬಂದಾಗ ವ್ಯಕ್ತಿ ಹಾಗೂ ಅಕ್ಕಪಕ್ಕದ ನಿವಾಸಿಗಳ ಮಧ್ಯೆ ಗಲಾಟೆ ಶುರುವಾಗಿದೆ. ರಾಮಚಂದ್ರಪ್ಪ(45) ಮೃತ ವ್ಯಕ್ತಿ. ರಾಮಚಂದ್ರಪ್ಪ ಸ್ವಂತ ಟ್ರಾಕ್ಟರ್ ಇಟ್ಟುಕೊಂಡಿದ್ದರು. ಪಕ್ಕದ ಮನೆಯ ನಿವಾಸಿಗಳ ಜೊತೆ ಶುರುವಾದ ಗಲಾಟೆಯಲ್ಲಿ ಈ ಅವಘಡ ಸಂಭವಿಸಿದೆ.
ದೃಷ್ಟಿ ತೆಗೆದ ನೀರನ್ನು ಸಂಜೆ ರಸ್ತೆಯಲ್ಲಿ ಹಾಕಲು ಮಹಿಳೆ ಬಂದಿದ್ದರು. ಈ ವೇಳೆ ರಾಮಚಂದ್ರಪ್ಪ ಮತ್ತು ಪಕ್ಕದ ಮನೆ ನಿವಾಸಿಗಳ ಮಧ್ಯೆ ಗಲಾಟೆ ನಡೆದಿದೆ. ಮಹಿಳೆಯರು ಗುಂಪು ಕಟ್ಟಿಕೊಂಡು ರಾಮಚಂದ್ರಪ್ಪ ಮೇಲೆ ಹಲ್ಲೆ ನಡೆದಿದೆ.
ಈ ವೇಳೆ ಹಲ್ಲೆಯಿಂದ ರಾಮಚಂದ್ರಪ್ಪ ನೆಲಕ್ಕೆ ಉರುಳಿ ಬಿದ್ದಿದ್ದ. ಕೂಡಲೇ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಮಚಂದ್ರಪ್ಪ ಸಾವನ್ನಪ್ಪಿದ್ದಾನೆ.
ಹಲ್ಲೆ ನಡೆಸಿದ ಇಬ್ಬರು ಮಹಿಳೆಯರು ಪೊಲೀಸರ ವಶಕ್ಕೆ ಪಡೆಯಲಾಗಿದ್ದು, ಆನೇಕಲ್ ಉಪವಿಭಾಗದ ಡಿವೈಎಪ್ಸಿ ಮೋಹನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.