ಮಾಡ್ರೆನ್ ಲೈಫ್ ಸ್ಟೈಲ್ನಿಂದಾಗಿ ಅನೇಕ ಮಂದಿ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ವಯಸ್ಸು ಇನ್ನೂ ಕೂಡ 20-25 ಕೂಡಆಗಿರುವುದಿಲ್ಲ. ಆಗಲೇ ತಲೆ ಕೂದಲಿನಲ್ಲಿ ಅಲ್ಲಲ್ಲಿ ಬಿಳಿ ಕೂದಲು ಕಾಣಿಸುತ್ತಿರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕೂದಲಿಗೆ ಎಣ್ಣೆ ಹಚ್ಚುವುದು ಮುಖ್ಯ. ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ಸಾಮಾನ್ಯವಾಗಿ ಜನರು ಇಷ್ಟಪಡುವುದಿಲ್ಲ . ಈ ಹಿನ್ನೆಲೆ ಬಿಳಿಕೂದಲನ್ನು ಸುಲಭವಾಗಿ ಕಪ್ಪಾಗಿಸಲು ಮನೆ ಮದ್ದು ಇಲ್ಲಿದೆ ನೋಡಿ.
ಮನೆಯಲಿರುವ ಎರಡೇ ಎರಡು ಪದಾರ್ಥಗಳನ್ನು ಬಳಸಿ ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಸುಲಭ ಪರಿಹಾರವನ್ನು ಪಡೆಯಬಹುದು.
ತೆಂಗಿನ ಮರದಲ್ಲಿ ಎಳನೀರು, ಕಾಯಿ, ಕರಟ ಮಾತ್ರವಲ್ಲದೆ ಅದರ ನಾರು (ತೆಂಗಿನ ಮಟ್ಟೆ) ಕೂಡ ತುಂಬಾ ಲಾಭದಾಯಕವಾಗಿದೆ. ತೆಂಗಿನ ಮಟ್ಟೆ/ಗುಂಜಿನಲ್ಲಿ ಅತ್ವಾ ತೆಂಗಿನ ಕಾಯಿಯ ನಾರಿನಲ್ಲಿ ಕೂದಲಿಗೆ ಅಗತ್ಯವಾದ ಹಲವು ಪೋಷಕಾಂಶಗಳಿವೆ. ಸಾಮಾನ್ಯವಾಗಿ ಮನೆಯಲ್ಲಿ ಒಲೆ ಉರಿಹಾಕಲು ಬಳಸಲ್ಪಡುವ ತೆಂಗಿನ ಮಟ್ಟೆಯಿಂದ/ ತೆಂಗಿನ ಕಾಯಿಯ ನಾರು ನಿಮ್ಮ ಬಿಳಿ ಕೂದಲಿಗೆ ಪರಿಹಾರ ಪಡೆಯಬಹುದು.
ಒಂದು ತವಾವನ್ನು ಚೆನ್ನಾಗಿ ಕಾಯಿಸಿ ಅದರ ಮೇಲೆ ತೆಂಗಿನ ನಾರನ್ನು ಹಾಕಿ ಅದು ಕಪ್ಪಾಗುವವರೆಗೂ ಹುರಿಯಿರಿ. ತೆಂಗಿನಕಾಯಿ ನಾರು ಪೂರ್ತಿ ಕಪ್ಪಾಗಿ ಅದೇ ಪುಡಿಯಾಗುತ್ತದೆ. ಅಗತ್ಯವಿದ್ದರೆ ಅದು ತಣ್ಣಗಾದ ಬಳಿಕ ಹಾಗೆ ಕೈಯಲ್ಲಿ ಮ್ಯಾಶ್ ಮಾಡಿ.
ಈ ರೀತಿ ತಯಾರಾದ ತೆಂಗಿನಕಾಯಿ ನಾರಿನ ಪುಡಿಯನ್ನು ಒಂದು ಗಾಜಿನ ಸೀಸೆಯಲ್ಲಿ ಹಾಗೆ ಶೇಖರಿಸಿ ಇಡಿ. ನಿಮಗೆ ಬೇಕೆಂದಾಗ ಸ್ವಲ್ಪ ಅಲೋವೆರಾ ಜೆಲ್ ಜೊತೆ ಈ ಪುಡಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿದರೆ ಕೂದಲು ಕೂಡಲೇ ಕಪ್ಪಗಾಗುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮವೂ ಇರುವುದಿಲ್ಲ