ಬೆಂಗಳೂರು:+ ಬೆಂಗಳೂರು:- ಕಮಾಂಡ್ ಆಸ್ಪತ್ರೆ ವಿಸ್ತರಣೆಗಾಗಿ 530 ಮರಗಳನ್ನು ಕಡಿಯಲು ಬಿಬಿಎಂಪಿ ನೀಡಿದ್ದ ಅನುಮತಿಗೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ.
ಸರ್ಕಾರಿ JOB ಸರ್ಚ್ ಮಾಡ್ತಿದ್ದೀರಾ!? ಲೋಕೋಪಯೋಗಿ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗ! ಹೀಗೆ ಅಪ್ಲೈ ಮಾಡಿ!
ಬಿಬಿಎಂಪಿಯ ಟ್ರೀ ಆಫೀಸರ್ 530 ಮರ ಕಡಿಯಲು ಅನುಮತಿ ನೀಡಿದ್ದಾರೆ. ಆದ್ರೆ, ಅದಕ್ಕೆ ಪರ್ಯಾಯವಾಗಿ ಮರ ಬೆಳಸುವ ಬಗ್ಗೆ ಸ್ಪಷ್ಟ ಕ್ರಮವಿಲ್ಲ. 530 ಮರ ಕಡಿಯಲು ಸೂಕ್ತ ಪ್ರಕ್ರಿಯೆ ಪಾಲಿಸಲಾಗಿಲ್ಲ. ಹೀಗಾಗಿ ಮರ ಕಡಿಯಲು ಮಧ್ಯಂತರ ತಡೆ ನೀಡುವಂತೆ ಅರ್ಜಿದಾರ ದತ್ತಾತ್ರೇಯ ದೇವರೆ ಪರ ವಕೀಲರು ಮನವಿ ಮಾಡಿದ್ದರು. ಈ ಮನವಿಯನ್ನು ಸಿಜೆ ಎನ್.ವಿ.ಅಂಜಾರಿಯಾ,ನ್ಯಾ. ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ಪುರಸ್ಕರಿಸಿದೆ.
ನಗರದ ಹೃದಯ ಭಾಗದಲ್ಲಿಅಷ್ಟೊಂದು ಮರಗಳನ್ನು ಕಡಿದು, ಅವುಗಳಿಗೆ ಬದಲಿಗೆ ನಗರ ಪ್ರದೇಶದಿಂದ ದೂರದಲ್ಲಿ ಗಿಡಗಳನ್ನು ನೆಟ್ಟರೆ ಏನು ಪ್ರಯೋಜನ? ಮರಗಳನ್ನು ಕಡಿಯಲು ಅನುಮತಿ ನೀಡುವಾಗ ನಿಯಮಗಳನ್ನು ಪಾಲನೆ ಮಾಡಿಲ್ಲ. ಹಾಗಾಗಿ ಸದ್ಯಕ್ಕೆ ಮರಗಳನ್ನು ಕತ್ತರಿಸಲು ಅನುಮತಿ ನೀಡಬಾರದು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮುಂದಿನ ಆದೇಶದವರೆಗೆ ಮರಗಳನ್ನು ಕತ್ತರಿಸಬಾರದು ಎಂದು ಮಧ್ಯಂತರ ಆದೇಶ ಹೊರಡಿಸಿದೆ