ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಈ ಸಂಬಂಧ ಈಗಾಗಲೇ 18 ಸೆಪ್ಟೆಂಬರ್ 2024ರಂದು ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿತ್ತು. ಆದರೆ ಈಗ ಮತ್ತೆ ಇದೇ ಉದ್ಯೋಗಗಳಿಗೆ ಅರ್ಜಿಗಳನ್ನು ಇಲಾಖೆ ಆಹ್ವಾನ ಮಾಡಿದೆ.
ಸಿಎಂ ಮುಡಾ ಕೇಸ್ನಲ್ಲಿ ಮರ್ಯಾದೆ ಕಳೆದುಕೊಂಡಿದ್ದಾರೆ: ಹೆಚ್ ವಿಶ್ವನಾಥ್!
ಪ್ರಸ್ತುತ ನೇಮಕಾತಿ ಪ್ರಾಧಿಕಾರದವರು 02 ಡಿಸೆಂಬರ್ 2024 ಪತ್ರದಲ್ಲಿ ಹಾಗೂ 17 ಜನವರಿ 2025 ರಂದು ‘ಕೆಪಿಎಸ್ಸಿ ಉದ್ಯೋಗ’ ತಂತ್ರಾಂಶದ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈಗಾಗಲೇ ಬಿಡುಗಡೆ ಮಾಡಿದ ಅಧಿಸೂಚನೆಯಂತೆ ಹೈದ್ರಾಬಾದ್-ಕರ್ನಾಟಕ ವೃಂದದ 12 ಹುದ್ದೆಗಳಲ್ಲಿ 11 ಉದ್ಯೋಗಗಳಿಗೆ ಮುಕ್ತ ಸ್ಪರ್ಧೆ ಅಭ್ಯರ್ಥಿಗಳು ಹಾಗೂ 01 ಹುದ್ದೆಗೆ ಸೇವಾನಿರತ ಅಭ್ಯರ್ಥಿಯನ್ನ ಭರ್ತಿ ಮಾಡಲಾಗುತ್ತದೆ.
ಹುದ್ದೆಗಳ ವರ್ಗೀಕರಣ ಹೀಗಿದೆ
ಸಾಮಾನ್ಯ ವರ್ಗ- 05
ಪರಿಶಿಷ್ಟ ಜಾತಿ- 02
ಪರಿಶಿಷ್ಟ ಪಂಗಡ- 01
ಪ್ರವರ್ಗ1- 01
ಪ್ರವರ್ಗ-2ಎ- 01
ಪ್ರವರ್ಗ-2ಬಿ- 01
ಸೇವಾನಿರತ (ಎಸ್ಸಿ)- 01
ಒಟ್ಟು ಉದ್ಯೋಗಗಳು– 11
ವಿದ್ಯಾರ್ಹತೆ
ಇಂಜಿನಿಯರಿಂಗ್ ಪದವಿ- ಸಿವಿಲ್ ಇಂಜಿನಿಯರ್, ಕನ್ಸ್ಟ್ರಕ್ಷನ್ ಟೆಕ್ನಲಾಜಿ, ಬಿಲ್ಡಿಂಗ್ ಅಂಡ್ ಕಂಸ್ಟ್ರಕ್ಷನ್ ಟೆಕ್ನಾಲಜಿ, ಸಿವಿಲ್ ಟೆಕ್ನಾಲಜಿ ಕಂಸ್ಟ್ರಕ್ಷನ್ ಟೆಕ್ನಾಲಜಿ, ಕಂಸ್ಟ್ರಕ್ಷನ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಜಿಯೋಮೆಕಾನಿಕ್ಸ್ ಮತ್ತು ಸ್ಟ್ರಕ್ಚರ್ಸ್, ಸ್ಟ್ರಕ್ಚರಲ್ ಅಂಡ್ ಫೌಂಡೇಷನ್ ಇಂಜಿನಿಯರಿಂಗ್, ಸ್ಟ್ರಕ್ಚರಲ್ ಇಂಜಿನಿಯರಿಂಗ್ ಮತ್ತು ಕಂಸ್ಟ್ರಕ್ಷನ್ ಪದವಿ. ಇವುಗಳಲ್ಲಿ ಯಾವುದಾದರು ಒಂದನ್ನು ಪೂರ್ಣಗೊಳಿಸಿರಬೇಕು.
ಮಾಸಿಕ ವೇತನ ಶ್ರೇಣಿ- 83,700 ದಿಂದ 1,55,200 ರೂಪಾಯಿಗಳು
ಅರ್ಜಿ ಸಲ್ಲಿಕೆ ಮಾಡಲು ದಿನಾಂಕಗಳು
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 20 ಜನವರಿ 2025
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 03 ಫೆಬ್ರವರಿ 2025