ಬೆಂಗಳೂರು:- ರಾಜ್ಯ ಬಿಜೆಪಿ ಬಣ ಬಡಿದಾಟಕ್ಕೆ ವಿರಾಮ ಹಾಕಲು ಟೆನ್ಶನ್ನಲ್ಲೇ ಹೆಣಗ್ತಿರುವ ದೆಹಲಿ ದೊರೆಗಳು ನಿನ್ನೆ ಘಟನೆಗೆ ಬೆಚ್ಚಿಬಿದ್ದಿದೆ. ಭಿನ್ನಮತ ಶಮನಕ್ಕೆ ಅಂತ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ರನ್ನ ಕಳಿಸಿತ್ತು. ಆದ್ರೆ, ರಾಧಾಮೋಹನ್ ದಾಸ ಆಡಿದ ಮಾತುಗಳೇ ಕೋರ್ ಕಮಿಟಿ ಸಭೆಯಲ್ಲಿ ಬೆಂಕಿ ಧಗಧಗಿಸಿದೆ..
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಈ ದಿನಗಳಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ!
ಇದು ಯುದ್ಧಕಾಂಡ. ಗಣಿನಾಡು ಬಳ್ಳಾರಿಯಲ್ಲಿ ಮೊಳಕೆಯೊಡೆದ ಯುದ್ಧಕಾಂಡ. ಸಂಡೂರು ಸೋಲಿನ ವಿಚಾರ ನಿನ್ನೆ ಕೋರ್ ಕಮಿಟಿ ಸಭೆಯಲ್ಲಿ ಪ್ರತಿಧ್ವನಿಸಿದೆ. ಸಂಡೂರು ಸೋಲು ನಿನ್ನೆ ಕೋರ್ ಕಮಿಟಿಯಲ್ಲಿ ಧಗಧಗಿಸಿದೆ. ಅಷ್ಟಕ್ಕೂ ಸಭೆಯಲ್ಲಿ ಆಗಿದ್ದೇನು? ರಾಮುಲು ಪಕ್ಷ ಬಿಡುವ ಮಾತನಾಡಿದ್ದೇಕೆ? ಈ ಬಗ್ಗೆ ಇಂಚಿಂಚು ಇಲ್ಲಿದೆ.
ರಾಧಾ ಮೋಹನ್ ದಾಸ್ಈಗ ಸಂಡೂರು ಬೈಎಲೆಕ್ಷನ್ನಲ್ಲಿ ಏನಾಯ್ತು? ಶ್ರೀರಾಮುಲು ಅಲ್ಲಿ ಏನ್ ಕೆಲಸನೇ ಮಾಡ್ಲಿಲ್ಲ. ಅಂದಿದ್ದಕ್ಕೆ ಬಿ.ಶ್ರೀರಾಮುಲು ಅಗರವಾಲ್ ಅವರೇ ಏನ್ ಮಾತನಾಡುತ್ತಿದ್ದೀರಿ. ನಿಮ್ಮ ಆರೋಪವನ್ನ ಸಾಕ್ಷಿ ಸಮೇತ ಸಾಬೀತು ಮಾಡಿ, ಮಾಡಲೇಬೇಕು ನೀವು ಎಂದಿದ್ದಾರೆ.
ಅದು ಮಾತ್ರವಲ್ಲ ಬಿ.ಶ್ರೀರಾಮುಲು ನಿಮಗೆ ಗೊತ್ತಿಲ್ಲ. ಇತಿಹಾಸ ತೆಗೆದು ನೋಡಿ. ಸಂಡೂರು ಕ್ಷೇತ್ರದಲ್ಲಿ ಒಂದೇ ಒಂದು ಬಾರಿ ಕೂಡ ಬಿಜೆಪಿ ಗೆದ್ದಿಲ್ಲ. ನಾಮಪತ್ರ ಸಲ್ಲಿಕೆ ದಿನದಿಂದಲೂ ನಾನು ಅಭ್ಯರ್ಥಿ ಪರವಾಗಿ ಓಡಾಡಿದ್ದೀನಿ ಎಂದು ಹೇಳಿದಾಗ, ರಾಧಾ ಮೋಹನ್ ದಾಸ್ ಸರಿ, ಪಕ್ಷದ ಅಭ್ಯರ್ಥಿ ಗೆಲ್ಲಿಸುವಲ್ಲಿ ನೀವು ಕೆಲಸ ಮಾಡಿದ್ರಾ? ಮಾಡಲಿಲ್ಲ ಎಂದಿದ್ದಾರೆ. ಇದಕ್ಕೆ ಮತ್ತಷ್ಟು ಬೇಜಾರು ಮಾಡಿಕೊಂಡ ಬಿ.ಶ್ರೀರಾಮುಲು ನೋಡಿ ನೀವು ಏನೇನೋ ಮಾತಾನಾಡಬೇಡಿ. ನಿಮಗೆ ಯಾರೋ ಕಿವಿ ಚುಚ್ಚಿ ಈ ಮಾತು ಹೇಳಿದ್ದಾರೆ.ಪಕ್ಷ ವಿರೋಧಿ ಮಾಡಿದ್ದೇನೆ ಎಂಬ ಮಾತು ನಿಮಗೆ ಯಾರೋ ಹೇಳಿದ್ದಾರೆ ಹೇಳಿ ಎಂದಿದ್ದಾರೆ.
ಕೋರ್ ಕಮಿಟಿ ಸಭೆ ಅಂತ್ಯ ಆಗ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಲು ನಿಂತ ರಾಮುಲುರನ್ನ ಓಡೋಡಿ ಬಂದು ಸಿ.ಟಿ.ರವಿ, ವಿಜಯೇಂದ್ರ ತಡೆದಿದ್ದಾರೆ. ಆದ್ರೆ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಸಂಘದ ಇಬ್ಬರು ಪ್ರಮುಖರಿಗೆ ಫೋನ್ ಮಾಡಿದ ರಾಮುಲು ಅಸಮಾಧಾನ ತೋಡ್ಕೊಂಡಿದ್ದಾರೆ..