ಮೈಸೂರು: ಮೈಸೂರು ಜಿಲ್ಲೆ ಟಿ ನರಸೀಪುರ ಪೋಲೀಸರ ಕಾರ್ಯಾಚರಣೆ ನಡೆಸಿ ನಕಲಿ ನೋಟು ಮುದ್ರಣ ಮಾಡುತ್ತಿದ್ದ ಅಪ್ಪ ಮಗನನ್ನು ಅರೆಸ್ಟ್ ಮಾಡಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ. ನಾಗೇಶ್ (27) ಪ್ರಸಾದ್ (53) ಬಂಧಿತ ಆರೋಪಿಗಳಾಗಿದ್ದು,
ಬಂಧಿತ ಆರೋಪಿಗಳಿಂದ ಸುಮಾರು 25 ಸಾವಿರ ಮೌಲ್ಯದ ನಕಲಿ ನೋಟು ಒಂದು ಪ್ರಿಂಟರ್ ವಶಕ್ಕೆ ಪಡೆಯಲಾಗಿದೆ. ತಮ್ಮದೇ ಜಮೀನಿನ ಶೆಡ್ ನಲ್ಲಿ ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದ ತಂದೆ ಮಗ, ಇಸ್ಪೀಟ್ ಆಟ ಆಡುವಾಗ ಹೆಚ್ಚಾಗಿ ನಕಲಿ ನೋಟು ಬಳಕೆ ಮಾಡುತ್ತಿದ್ದರು. ಇನ್ನೂ ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.