ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗುಳ್ಳಾಪುರದಲ್ಲಿ ಸಂಭವಿಸಿದ್ಧ ರಸ್ತೆ ಅಪಘಾತದಲ್ಲಿ, ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕನೂ ಮೃತಪಟ್ಟಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಹಾವೇರಿ ಜಿಲ್ಲೆ ಸವಣೂರಿನ ಅಸ್ಲಂ ಬಾಬುಲಿ ಬೆಣ್ಣಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತ ಸಂಬಂಧಿಕರು ಗೋಳು ಹೇಳತೀರದಾಗಿದ್ದು
ನಮಗೆ ಇನ್ನು ಮುಂದೆ ಸಂತೆಗೆ ಹೋಗಬಾರದು ಅನಿಸುತ್ತಿದೆ.
ನಮ್ಮ ಮನೆಲಿ ಸಂತೆ ಅಂದ್ರೆ ತಗೊಂಡು ಹೊಡೆಯುತ್ತಿದೆನಾವು ಕೂಡ ಪ್ರತಿ ವಾರ ಸಂತೆಗೆ ಹೋಗುತ್ತಿದ್ದೆವು. ಆದರೆ, ಇವತ್ತು ತರಕಾರಿ ಇರದ ಕಾರಣಕ್ಕೆ ಹೋಗಿಲ್ಲ. ಇಂಥ ದುರ್ಘಟನೆ ಸಂಭವಿಸಬಾರದಿತ್ತು ಎಂದಿದ್ದಾರೆ. ಏತನ್ಮಧ್ಯೆ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಿಂದೇಟು ಹಾಕಿದೆ ಎಂಬ ಆರೋಪ ಕೇಳಿಬಂದಿದೆ.
ಆದರೆ, ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ್ ಆರೋಪಗಳನ್ನು ಅಲ್ಲಗಳೆದಿದ್ದು ಬೆಳಗಿನ ಜಾವ 6:30ಕ್ಕೆ ಯಲ್ಲಾಪುರ ಹತ್ತಿರ ಅವಘಡ ಸಂಭವಿಸಿದೆ. 26 ಕೂಲಿ ಕಾರ್ಮಿಕರು ಅಪಘಾತಕ್ಕಿಡಾಗಿದ್ದಾರೆ. ನಮ್ಮಲ್ಲಿ 11 ಜನ ಬಂದಿದ್ದರು, ಅದರಲ್ಲಿ ಒಬ್ಬ ಸ್ಥಳದಲ್ಲೇ ತೀರಿಹೋಗಿದ್ದರು. ಗಾಯಾಳುಗಳಿಗೆ ಬೇಕಾದ ಚಿಕಿತ್ಸೆ ಈಗಾಗಲೇ ನೀಡಲಾಗಿದೆ.
ಡಾ.ರಾಜಶೇಖರ್ ನೇತೃತ್ವದ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಗಾಯಾಳುಗಳನ್ನ ಈಗ ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇನ್ನು ಗಾಯಾಳು ಸಂಬಂದಿಕರು ಮಾತನಾಡಿ , ನಮಗೆ ಸರಕಾರದಿಂದ ಪರಿಹಾರ ಕೊಡಬೇಕು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಅಬ್ಬಯ್ಯಾ ಪ್ರಸಾದ್ ಹಾಗೂ ಹಾವೇರಿ ಜಿಲ್ಲೆಯ ಜನಪ್ರತಿನಿಧಿಗಳು ಸಹಾಯ ಮಾಡಲಿ ಎಂದರು.