ಬುಧವಾರ ಬೆಳ್ಳಂಬೆಳಗ್ಗೆಯೇ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗುಳ್ಳಾಪುರ ಘಟ್ಟ ಪ್ರದೇಶದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಹೌದು ಹಾವೇರಿ ಸವಣೂರಿನಿಂದ ಕುಮಟಾದ ಕಡೆ ಹಣ್ಣು ತರಕಾರಿ ತುಂಬಿದ್ದ ಲಾರಿ ಗುಳ್ಳಾಪುರ ಭಾಗಕ್ಕೆ ಬರುತಿದ್ದಂತೆ ಚಾಲಕನ ನಿರ್ಲಕ್ಷದಿಂದ ವಿದ್ಯತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಸ್ಥಳದಲ್ಲೇ 9 ಜನರ ಸಾವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 16 ಜನ ಗಂಭೀರ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಹುಬ್ಬಳ್ಳಿ, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಶವಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಗಾಯಗೊಂಡವರು ಹಾಗೂ ಮೃತರಾದವರು ಹಾವೇರಿಯ ಸವಣೂರು ಮೂಲದವರಾಗಿದ್ದು, ಕುಮಟಾದಲ್ಲಿ ನಡೆಯುವ ಸಂತೆಗೆ ಹಣ್ಣು ತರಕಾರಿ ಒಯ್ಯುತ್ತಿದ್ದರು. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟವರು:
- ಫಯಾಜ್ ತಂದೆ ಇಮಾಮ್ಸಾಬ್ ಜಮಖಂಡಿ 45-ವರ್ಷ
- ವಾಸಿಮ್ ತಂದೆ ಮುಲ್ಲಾ ಮುಡಿಗೇರಿ 25- ವರ
- ಇಜಜ್ ತಂದೆ ಮಸ್ತಾಕ್ ಮುಲ್ಲಾ 20 ವರ್ಷ
- ಸಾದುಕ್ ತಂದೆ ಬಾಷಾ ಪರಾಸ್ 30 ವರ್ಷ
- ಗುಲಾಮ್ ಹುಸೇನ್ ತಂದೆ ಗುಡುಸಾಬ್ ಜವಳಿ
- ಇಮ್ತಿಯಾಜ್ ತಂದೆ ಮೊಹಮ್ಮದ್ ಜಾಪರ್ ಮುಡಗೇರಿ 40 ವರ್ಷ
- ಅಲ್ಪಾಜ್ ತಂದೆ ಜಾಪರ ಮಂಡಕಿ 25 ವರ್ಷ
- ಜಿಲಾನಿ ತಂದೆ ಅಬ್ದುಲ್ ಗಪಾರ್ ಜಕಾತಿ 20 ವರ್ಷ
- ಅಸ್ಲಾಂ ತಂದೆ ಬಾಬು ಬೇಣ್ಣಿ 24 ವರ್ಷ ಎಲ್ಲರೂ ಸವಣೂರು
- ಜಲಾಲ್ ತಾರಾ 30 ವರ್ಷ ಸವಣೂರು. (ಹುಬ್ಬಳಿ ಕೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ)
ಹುಬ್ಬಳಿ ಕೀಮ್ಸ ಆಸ್ಪತ್ರೆಯಲ್ಲಿ ಚಿಕಿತೆಯಲ್ಲಿರುವುವರು
- ಅಶ್ರಪ್ ತಂದೆ ನಬಿ ಸಾಬ್ ಲಾರಿ ಡ್ರೈವರ್ 18 ವರ್ಷ
- ಖ್ವಾಜಾ ತಂದೆ ಮೊಹಮ್ಮದ್ ಗೌಸ್ ಕಿಸಮತಗಾರ್ 22 ವರ್ಷ
- ಮೊಹಮ್ಮದ್ ಸಾದಿಕ ತಂದೆ ಖ್ವಾಜಾಮೀರ್ ಬತ್ತೇರಿ 25 ವರ್ಷ
- ಖ್ವಾಜಾ ಮೈನು ತಂದೆ ಬಷೀರ್ ಅಹಮ್ಮದ್ ಕಾಲೆಕಾಲನ್ನವರ್ 24 ವರ್ಷ
- ನಿಜಾಮ್ 30 ವರ್ಷ
- ಮದ್ಲಾನ್ ಸಾಬ್ 24 ವರ್ಷ
- ಜಾಪರ್ ತಂದೆ ಮುಕ್ತಿಯಾರ್ ಪ್ರಾಸ್ 22 ವರ್ಷ
ಯಲ್ಲಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು
- ಮಲ್ಲಿಕ ರೆಹಾನ್ ತಂದೆ ಮೊಹಮ್ಮದ್ ರಫೀಕ್ ಅಕ್ಕಿ 21 ವರ್ಷ
- ಅಪ್ತಾಬ್ ತಂದೆ ಭಷೀರ್ ಅಹಮಮದ್ ಮಂಚಕಿ 23 ವರ್ಷ
- ಗೌಸ್ ಮೈದ್ದೀನ್ ತಂದೆ ಅಬ್ದುಲ್ ಗಣಿ ಬೊಮ್ಮನಹಳ್ಳಿ 30 ವರ್ಷ
- ಇರ್ಪಾನ್ ತಂದೆ ಮುಕ್ಷುಲ್ ಗುಡಿಗೇರಿ 17 ವರರ್ಷ
- ನೂರ ಅಹಮ್ಮದ್ ತಂದೆ ಮೊಹಮ್ಮದ್ ಜಾಪರ್ ಜಮಕಂಡಿ 30 ವರ್ಷ
- ಅಪ್ಸರ್ ಕಾಂಜಾಡ್ 34 ವರ್ಷ
- ಸುಭಾಷ ಗೌಡರ್ 17 ವರ್ಷ
- ಖಾದ್ರಿ ತಂದೆ ಗೂಡು ಸಾಬ್ ಜವಳಿ 26 ವರ್ಷ
- ಸಾಬೀರ್ ಅಹಮ್ಮದ ಬಾಬಾ ಹುಸೇನ್ ಗವಾರಿ 38 ವರ್ಷ
- ಮರ್ದಾನ್ ಸಾಬ್ ತಂದೆ ಕಮಲ್ ಬಾಷಾ ತಾರಾಡಿಗ 22 ವರ್ಷ
- ರಪಾಯಿ ತಂದೆ ಬಾಕರ್ ಚೌರ 21 ವರ್ಷ
- ಮೊಹಮ್ಮದ್ ಗೌಸ ತಂದೆ ಗಪಾರ್ ಅಕ್ತರ್ 22 ವರ್ಷ