ಲೇಬರ್ ಕಾಂಟ್ಯಾಕ್ಟರ್ ಅಗಿದ್ದ ಆ ವ್ಯಕ್ತಿ.. ಕೆಲ ಜನ ಕೆಲಸಗಾರ ಇಟ್ಟಕೊಂಡು ಕೆಲಸ ಮಾಡಸ್ತಿದ್ದ, ಅದ್ರೆ ಇದಕ್ಕ ಇದ್ದಹಾಗೆ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಹೊರವಲಯದಲ್ಲಿಟ್ಟಿದರು ಅದೊಂದು ಗ್ಯಾಂಗ್.. ಅದ್ರೆ ಮಾಹಿತಿ ಮೇರಿಗೆ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿ ಕಂಬಿಹಿಂದೆ ತಳಿದ್ದಾರೆ. ಹಾಗಾದರೆ ಅದ್ಯಾವ್ ಕಿಡ್ನಾಪ್ ಗ್ಯಾಂಗ್ ಅಂತೀರಾ ತೋರ್ಸ್ತೀವಿ ನೋಡಿ..
ಯೆಸ್.. ಒಮ್ಮೆ ಈ ಸಿಸಿಟಿವಿ ದೃಶ್ಯಗಳನ್ನು ನೋಡಿಕೊಂಡು ಬಿಡಿ.. ರಾತ್ರಿ ವೇಳೆಯಲ್ಲಿ ಮೂವರು ವ್ಯಕ್ತಿಯನ್ನು ಹೇಗೆ ಎಳೆದುಕೊಂಡು ಹೋಗ್ತಿದ್ದಾರ ಅಂತಾ.. ಅದ್ರೆ ಇದ್ಯಾವುದು ಗಲಾಟೆ ಅಲ್ಲ.. ಕಿಡ್ನಾಪ್ ಪ್ರಕರಣ.. ಲೇಬರ್ ಕಾಂಟ್ಯಾಕ್ಟರ್ ಶಿವಲಿಂಗ ಪಾಟೀಲ್ ಅನ್ನೊ ವ್ಯಕ್ತಿಯನ್ನು ಆರೋಪಿಗಳ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಆರ್.ಎಂ.ಸಿ.ಯಾರ್ಡ್ ಠಾಣೆ ಪೊಲೀಸರು ಹಡೆಮುರಿ ಕಟ್ಟಿದ್ದಾರೆ. ಅಭಿಷೇಕ ಗೌಡ, ಪ್ರಥಮ್, ಅಭಿ, ಚಂದ್ರಯ್ಯ, ನಿಖಿಲ್, ವಿನೋದ್, ದೀಪಕ್ ಹಾಗೂ ಉದಯ್ ಎಂಬು ಆರೋಪಿಗಳನ್ನು ಬಂಧಿಸಿದ್ದಾರೆ..
ಹೌದು… ನವೆಂಬರ್ 13 ರಂದು ಆರ್.ಎಂ.ಸಿ ಯಾರ್ಡ್ ಬಳಿಯ ಲೇಬರ್ ಶೆಡ್ನಿಂದ ಶಿವಲಿಂಗ್ ಪಾಟೀಲ್ (32) ಎಂಬ ಗುತ್ತಿಗೆದಾರನನ್ನ ಆರೋಪಿಗಳ ಗ್ಯಾಂಗ್ ಅಪಹರಿಸಲಾಗಿತ್ತು. ಕಾರ್ಮಿಕರಿಗೆ ಸಂಬಳ ನೀಡಲು ರಾತ್ರಿ 11 ಗಂಟೆಗೆ ಆರ್.ಎಂ.ಸಿ ಯಾರ್ಡ್ ಬಳಿಯ ಶೆಡ್ಗೆ ತೆರಳಿದ್ದ ಶಿವಲಿಂಗ್ ಪಾಟೀಲ್, ಅಲ್ಲಿಯೇ ಉಳಿದುಕೊಳ್ಳುವುದಾಗಿ ತಂದೆಗೆ ಹೇಳಿದ್ದರು. ಆದರೆ ಅದೇ ವೇಳೆ ಶಿವಲಿಂಗ್ ಅವರನ್ನ ಆರೋಪಿಗಳ ಗ್ಯಾಂಗ್ ಕಿಡ್ನಾಪ್ ಮಾಡಿತ್ತು.
ಮಾರನೇ ದಿನ ಶಿವಲಿಂಗ್ ಪಾಟೀಲ್ ಅವರ ತಂದೆ ರಾಜೇಶ್ ಪಾಟೀಲ್ ಅವರು ಶೆಡ್ ಬಳಿ ಬಂದಾಗ ಮಗ ಸ್ಥಳದಲ್ಲಿರಲಿಲ್ಲ. ಇತ್ತ ರಾಜೇಶ್ ಪಾಟೀಲ್ ಅವರಿಗೆ ಕರೆ ಮಾಡಿದ್ದ ಆರೋಪಿಗಳು 1 ಕೋಟಿ ರೂ ಹಣಕ್ಕೆ ಬೇಡಿಕೆಯಿಟ್ಟಿದ್ದರು. ತಕ್ಷಣ ಆರ್.ಎಂ.ಸಿ ಯಾರ್ಡ್ ಠಾಣೆಗೆ ರಾಜೇಶ್ ಪಾಟೀಲ್ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದ ವೇಳೆ ಆರೋಪಿ ಕಿಡ್ನಾಪ್ ಕೃತ್ಯ ಗೊತ್ತಾಗಿತ್ತು.
ಶಿವಲಿಂಗ ಅವರ ಬಳಿ ಕೆಲಸ ಮಾಡ್ತಿದ್ದ ಪ್ರಥಮ ಎಂಬ ಆರೋಪಿ ಗ್ಯಾಂಗ್ ಗೆ ಮಾಹಿತಿ ನೀಡಿದ್ದ, ಕಿಡ್ನಾಪ್ ಮಾಡಿದ್ರೆ ಹಣ ಸಿಗುತ್ತೆ ಅಂತಾ.. ಮಾತಿನಂತೆ ಅಭಿಷೇಕ, ಬಸವ ಹಾಗೂ ಪುಟ ಗಿರಿ ಮೂವರು ಸೇರಿ ಶಿವಲಿಂಗನನ್ನ ಕಿಡ್ನಾಪ್ ಮಾಡಿದ್ದರು.. ಮಾಹಿತಿ ತಿಳಿಯುತ್ತಿದ್ದಂತ ಆರೋಪಿಗಳು ಇದ್ದ ಸ್ಥಳಕ್ಕೆ ದಾಳಿ ಮಾಡಿ ಎಂಟು ಜನ ಆರೋಪಿಯನ್ನ ಬಂಧಿಸಿದ್ದಾರೆ.
ಇನ್ನು ಬಂಧಿತರ ವಿರುದ್ಧ ಮಂಡ್ಯ ಜಿಲ್ಲೆಯ ಹಲವು ಠಾಣೆಗಳಲ್ಲಿ ಅಪಹರಣ ಸೇರಿದಂತೆ ಮತ್ತಿತರ ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ತಿಳಿದು ಬಂದಿದ್ದು, ಸದ್ಯ ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ತಳಿದ್ದಾರೆ ಪೊಲೀಸರು. ಪ್ರಕರಣ ಮತ್ತೊಬ್ಬ ಆರೋಪಿ ಬಸವರಾಜ್ ಪೊಲೀಸರು ಬಲೆ ಬೀಸಿದ್ದಾರೆ.