ನಟ ಸೈಫ್ ಅಲಿ ಖಾನ್ ದಾಳಿಕೋರನ ಹಲ್ಲೆಗೆ ಒಳಗಾಗಿದ್ದು ಇದೀಗ ಚಿಕಿತ್ಸೆಯ ಬಳಿಕ ಮನೆಗೆ ತೆರಳಿದ್ದಾರೆ. ಘಟನೆಯ ಬಳಿಕ ಆರೋಪಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಂದು ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ರನ್ನು ಆಸ್ಪತ್ರೆಗೆ ದಾಖಲು ಮಾಡಿ ಜೀವ ಉಳಿಸಿದ್ದ ಓರ್ವ ಆಟೋ ಡ್ರೈವರ್. ಸರಿಯಾದ ಸಮಯಕ್ಕೆ ಸೈಫ್ಗೆ ಸಹಾಯ ಮಾಡಿದ ಆಟೋ ಡ್ರೈವರ್ಗೆ ಸೈಫ್ ಎಷ್ಟು ಹಣ ನೀಡಿದ್ದಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ರನ್ನು ಸೈಫ್ ಮಗ ಇಬ್ರಾಹಿಮ್ ಆಸ್ಪತ್ರೆಗೆ ಸೇರಿಸಲು ಮುಂದಾದರು. ಆದರೆ ಆ ಸಮಯದಲ್ಲಿ ಯಾವ ಕಾರು ಕೂಡ ಸಿದ್ಧ ಇರಲಿಲ್ಲ. ಹೀಗಾಗಿ, ಆಟೋ ಡ್ರೈವರ್ನ ಕರೆದು ಆಟೋದಲ್ಲಿ ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಅವರ ಹೆಸರು ಭಜನ್ ಸಿಂಗ್. ಸಹಾಯಕ್ಕೆ ಕರೆದಾಗ ಅವರು ತಕ್ಷಣಕ್ಕೆ ಬಂದರು. ಹೀಗಾಗಿ ಆ ವ್ಯಕ್ತಿಗೆ 11 ಸಾವಿರ ರೂಪಾಯಿ ರಿವಾರ್ಡ್ ನೀಡಲಾಗಿದೆ. ಸೈಫ್ ಕುಟುಂಬದಿಂದ ರಿವಾರ್ಡ್ ಕೊಡಲಾಗಿದೆ ಎನ್ನಲಾಗಿದೆ.
ಈ ಮೊದಲು ಆಟೋ ಡ್ರೈವರ್ ಸೈಫ್ ಅಲಿ ಖಾನ್ ಅವರ ಕುಟುಂಬದಿಂದ ಬಾಡಿಗೆ ಪಡೆದಿರಲಿಲ್ಲ. ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಕ್ಕೆ ಆಟೋ ಡ್ರೈವರ್ನ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಅವರು ನಡೆದ ಘಟನೆ ವಿವರಿಸಿದ್ದರು. ಇದು ಸೇವೆ ಎನ್ನುವ ಕಾರಣಕ್ಕೆ ರಿಕ್ಷಾ ಚಾಲಕ ಹಣ ಪಡೆದಿರಲಿಲ್ಲ ಎನ್ನಲಾಗಿದೆ.
‘ಆ ವ್ಯಕ್ತಿಯ ಬೆನ್ನಿನ ಭಾಗ ಸಾಕಷ್ಟು ರಕ್ತಸಿಕ್ತವಾಗಿತ್ತು. ನನಗೆ ಅದು ಸೈಫ್ ಅಲಿ ಖಾನ್ ಅನ್ನೋದು ಕೂಡ ಗೊತ್ತಿರಲಿಲ್ಲ. ಯಾವುದೋ ವ್ಯಕ್ತಿಗೆ ಗಾಯವಾಗಿದೆ ಎಂದುಕೊಂಡಿದ್ದೆ. ರಿಕ್ಷಾದಿಂದ ಇಳಿದು ಅವರು ಲೀಲಾವತಿ ಆಸ್ಪತ್ರೆಗೆ ತೆರಳುವಾಗ ಮುಖ ಕಂಡಿತು. ಆಗ ಅದು ಸೈಫ್ ಎನ್ನುವ ವಿಚಾರ ಗೊತ್ತಾಯಿತು’ ಎಂದು ಆಟೋ ಡ್ರೈವರ್ ಹೇಳಿದ್ದಾರೆ.