ಬೆಂಗಳೂರು:- ನಗರದಲ್ಲಿ ಇ-ಖಾತಾ ನೋಂದಣಿಯ ಸಮಸ್ಯೆ ಬಗೆಹರಿಸಿದ್ದೇವೆ ಎಂದು ಪಾಲಿಕೆ ಅದೆಷ್ಟೋ ಬಾರಿ ಹೇಳಿದರೂ, ಗೊಂದಲ ಮಾತ್ರ ನಿವಾರಣೆಯಾಗಿಲ್ಲ. ಇತ್ತ ಇ-ಖಾತಾ ನೊಂದಣಿ ಪರದಾಟದ ಮಧ್ಯೆಯೇ ಬಿಬಿಎಂಪಿ ಹಾಗೂ ಸರ್ಕಾರ ಇ-ಖಾತಾ ವ್ಯವಸ್ಥೆಯನ್ನು ತೆರಿಗೆ ವ್ಯಾಪ್ತಿಗೆ ತರಲು ಹೊರಟಿವೆ.
ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ!
ದಾಖಲೆಗಳು ಸರಿಯಿದ್ದರೆ ಸರ್ವರ್ ಸರಿ ಇರಲ್ಲ, ಸರ್ವರ್ ಸರಿಯಿದ್ದರೆ ದಾಖಲೆ ಇಲ್ಲ ಎಂಬಂಥ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವ ಜನ ಇ-ಖಾತಾ ಪಡೆಯಲು ಪರದಾಡುತ್ತಿದ್ದಾರೆ.
ಇನ್ನು ಕೃಷಿಭೂಮಿಯಿಂದ ಪರಿವರ್ತನೆಯಾದ ಜಾಗಗಳು, ಬಿಡಿಎ ಸ್ವಾಧೀನದ ಬಳಿಕ ಕೈಬಿಟ್ಟ ಜಾಗಗಳು, ಎ ಖಾತಾ , ಬಿ ಖಾತಾ ಪಡೆಯುವಾಗ ಮ್ಯಾನುವಲ್ ಇದ್ದಿದ್ದರಿಂದ ಕೆಲ ದಾಖಲೆಗಳು ಇಲ್ಲದಿದ್ರೂ ಖಾತಾ ಲಭ್ಯವಾಗಿದೆ. ಆದರೆ, ಇದೀಗ ಇ-ಖಾತಾ ಮಾಡಿಸಲು ಕೆಲವು ದಾಖಲೆಗಳು ಸೂಕ್ತ ರೀತಿಯಲ್ಲಿ ಒದಗಿಸಲು ಆಗದೇ ಇರುವುದು ಜನರಿಗೆ ಸಂಕಷ್ಟ ತಂದಿಟ್ಟಿದೆ.
ಇತ್ತೀಚೆಗೆಷ್ಟೇ ಇ-ಖಾತಾ ತೆರೆಯಲು ಪಾಸ್ಪೋರ್ಟ್ ಕಚೇರಿ ಮಾದರಿಯಲ್ಲಿ ತಾತ್ಕಾಲಿಕ ಕೇಂದ್ರಗಳನ್ನು ತೆರೆಯುತ್ತೇವೆ ಎಂದಿದ್ದ ಪಾಲಿಕೆಯ ಮಾತು ಬರೀ ಮಾತಾಗಿಯೇ ಉಳಿದಿದೆ. ಇತ್ತ ಇ-ಖಾತಾ ಪಡೆಯುವ ಸರ್ಕಸ್ನಲ್ಲಿ ಬೇಸತ್ತ ಜನರು ಇ-ಖಾತಾ ಇಲ್ಲದೇ ಇರುವುದರಿಂದ ಆಸ್ತಿಗಳನ್ನು ಮಾರಾಟ ಮಾಡಲೂ ಪರದಾಡುತ್ತಿದ್ದಾರೆ.