ಕಳೆದ 11 ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿರುವ ನಟ ಕಿಚ್ಚ ಸುದೀಪ್ ಇದೀಗ ಬಿಗ್ ಬಾಸ್ ನಿರೂಪಣೆಗೆ ಗುಡ್ ಬಾಯ್ ಹೇಳಿದ್ದಾರೆ. ಇದು ಸುದೀಪ್ ಅವರ ಸಾಕಷ್ಟು ಅಭಿಮಾನಿಗಳಿಗೆ ಬೇಸರ ತರಿಸಿದೆ. ಇದೀಗ ಸುದೀಪ್ ನಿರೂಪಣೆಗೆ ವಿದಾಯ ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಗ್ ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿ ಧನರಾಜ್ ಅಚಾರ್, ಸುದೀಪ್ ಇಲ್ಲದೇ ಬಿಗ್ ಬಾಸ್ ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದಿದ್ದಾರೆ.
ಸುದೀಪ್ ಅವರ ಈ ನಿರ್ಧಾರ ಬಿಗ್ ಬಾಸ್ ಕಂಟೆಸ್ಟಂಟ್ಗಳಿಗೂ ಬೇಸರ ತಂದಿದೆ. ಸುದೀಪ್ ಇಲ್ಲದೇ ಬಿಗ್ಬಾಸ್ ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಈ ಸೀಸನ್ನಲ್ಲೇ ಇಲ್ಲ ಎನ್ನಲಾಗಿತ್ತು. ನಮ್ಮ ಅದೃಷ್ಟಕ್ಕೆ ಸುದೀಪ್ ಇದ್ದಾರೆ. ಮುಂದೆ ಸುದೀಪ್ ಸರ್ ನಿರೂಪಣೆ ಇರೋದಿಲ್ಲ ಅಂದ್ರೆ ಮುಂದೆ ಬರುವ ಕಂಟೆಸ್ಟಂಟ್ಗಳಿಗೆ ಅದು ದೊಡ್ಡ ನಿರಾಸೆ. ಅವರ ಕೊನೆಯ ಪಂಚಾಯ್ತಿಯಲ್ಲಿ ನಾವಿದ್ವಿ ಅನ್ನೋದೇ ನಮ್ಮ ಸೌಭಾಗ್ಯ ಎಂದು ಧನರಾಜ್ ಹೇಳಿದ್ದಾರೆ.
ಇನ್ನೂ ಬಿಗ್ ಬಾಸ್ ಮನೆಯಲ್ಲಿದ್ದಾಗ ಸ್ಪರ್ಧಿಗಳಿಗೆ ಅವರು ಆಡುತ್ತಿದ್ದ ಮಾತು ಸ್ಫೂರ್ತಿ ಕೊಡುತ್ತಿತ್ತು. ಸುದೀಪ್ ಸರ್ ಬಿಗ್ ಬಾಸ್ಗೆ ಬೇಕು ಎಂಬುದು ನಮ್ಮ ಆಸೆ ಎಂದಿದ್ದಾರೆ ಧನರಾಜ್.