2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಈಗಾಗಲೇ ಮುಗಿದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಲೀಸ್ ಮಾಡಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಅವರು ಪಂಜಾಬ್ ತಂಡದ ಪಾಲಾಗಿದ್ದಾರೆ. ಪಂಜಾಬ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಮ್ಯಾಕ್ಸಿ ಖರೀದಿಗೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಪಂಜಾಬ್ ಕಿಂಗ್ಸ್ 4.20 ಕೋಟಿ ನೀಡಿ ಮ್ಯಾಕ್ಸಿ ಅವರನ್ನು ಖರೀದಿಸಿದೆ.
ಉತ್ತಮ ಪ್ರದರ್ಶನ ನೀಡದ ದುಬಾರಿ ಆಟಗಾರರನ್ನೇ ಆರ್ಸಿಬಿ ಕೈ ಬಿಟ್ಟಿದೆ. ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಆರ್ಸಿಬಿ ರಿಲೀಸ್ ಮಾಡಿತ್ತು. 2021ರ ಹರಾಜಿನಲ್ಲಿ ಮ್ಯಾಕ್ಸ್ವೆಲ್ ಅವರನ್ನು 14.25 ಕೋಟಿ ರೂಪಾಯಿ ನೀಡಿ ಆರ್ಸಿಬಿ ಖರೀದಿ ಮಾಡಿತ್ತು. 2023ರ ಐಪಿಎಲ್ನಲ್ಲಿ 400 ರನ್ ಗಳಿಸಿದ್ದ ಮ್ಯಾಕ್ಸಿ ಕಳೆದ ಸೀಸನ್ 2024ರ ಐಪಿಎಲ್ನಲ್ಲಿ ಕೇವಲ 52 ರನ್ ಗಳಸಿದರು. ಈ ಮೂಲಕ ಆರ್ಸಿಬಿಗೆ ಮ್ಯಾಕ್ಸ್ವೆಲ್ ದೊಡ್ಡ ತಲೆನೋವಾಗಿ ಪರಿಣಮಿಸಿದ್ರು.
ಕಳೆದ ವರ್ಷ ಅಂದ್ರೆ 2024ರ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ ಕೆಲವು ಆಟಗಾರರನ್ನ ಖರೀದಿಸದೆ, ಆರ್ಟಿಎಂ ಕೂಡ ಬಳಸದೆ ಅಚ್ಚರಿ ಮೂಡಿಸಿತ್ತು. ಇದು ಅಭಿಮಾನಿಗಳಿಗೆ ಶಾಕ್ ಜೊತೆಗೆ ಬೇಸರ ತಂದಿತ್ತು. ಇದರಲ್ಲಿ ಪ್ರಮುಖ ಆಟಗಾರನೆಂದರೆ ಆಸ್ಟ್ರೇಲಿಯಾದ ವಿದ್ವಂಸಕಾರಿ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಒಬ್ಬರು. ಕಳೆದ ಐಪಿಎಲ್ನಲ್ಲಿ ನಿರೀಕ್ಷಿ ಪ್ರದರ್ಶನ ತೋರಲಿಲ್ಲ ಎಂಬ ಕಾರಣಕ್ಕೆ ಅವರನ್ನ ಆರ್ಸಿಬಿ ಮ್ಯಾನೇಜ್ಮೆಂಟ್ ಹರಾಜಿನಲ್ಲಿ ಖರೀದಿಸಲಿಲ್ಲ. ಆದರೆ ಇದೀಗ ಅದೇ ತಂಡಕ್ಕೆ ದೊಡ್ಡ ನಷ್ಟವನ್ನುಂಟು ಮಾಡಲಿದೆ.
ಎಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದ್ದ ಬಳಿಕ ಆಸ್ಟ್ರೇಲಿಯಾ ದಾಂಡಿಗ ಗ್ಲೆನ್ ಮ್ಯಾಕ್ಸ್ವೆಲ್ ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿ ಮ್ಯಾಕ್ಸ್ವೆಲ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದರು.
ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್ನಲ್ಲಿನ ಗ್ಲೆನ್ ಮ್ಯಾಕ್ಸ್ವೆಲ್ ಅವರ ಕಳಪೆ ಫಾರ್ಮ್. IPL 2024 ರಲ್ಲಿ ಆರ್ಸಿಬಿ ಪರ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮ್ಯಾಕ್ಸಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿದ್ದರು. ಅದರಲ್ಲೂ ಒಂದೇ ಸೀಸನ್ನಲ್ಲಿ 5 ಬಾರಿ ಸೊನ್ನೆಗೆ ಔಟಾಗಿದ್ದರು. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಮ್ಯಾಕ್ಸ್ವೆಲ್ಗೆ ತಂಡದಿಂದ ಗೇಟ್ ಪಾಸ್ ನೀಡಿದ್ದರು.
ಹೀಗೆ ಹೊರಬಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 4.20 ಕೋಟಿ ರೂ. ಖರೀದಿಸಿದೆ. ಈ ಖರೀದಿ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ವೆಲ್ ಅವರಿಗೆ ಬ್ಯಾಟ್ ಮತ್ತೆ ಸದ್ದು ಮಾಡಲಾರಂಭಿಸಿದೆ. ಅದರಲ್ಲೂ ಬಿಗ್ ಬ್ಯಾಷ್ ಲೀಗ್ನಲ್ಲಿ ಮ್ಯಾಕ್ಸಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಈ ಬಾರಿಯ ಬಿಗ್ ಬ್ಯಾಷ್ ಲೀಗ್ನಲ್ಲಿ ಈವರೆಗೆ 8 ಇನಿಂಗ್ಸ್ ಆಡಿರುವ ಗ್ಲೆನ್ ಮ್ಯಾಕ್ಸ್ವೆಲ್ 297 ರನ್ ಕಲೆಹಾಕಿದ್ದಾರೆ. ಅದು ಕೂಡ ಕೇವಲ 153 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಮ್ಯಾಕ್ಸ್ವೆಲ್ 194.1 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ ಎದುರಾಳಿ ಬೌಲರ್ಗಳ ಬೆಂಡೆತ್ತಿದ್ದಾರೆ. ಈ ವೇಳೆ ಮ್ಯಾಕ್ಸಿ ಬ್ಯಾಟ್ನಿಂದ 26 ಭರ್ಜರಿ ಸಿಕ್ಸ್ ಹಾಗೂ 17 ಫೋರ್ಗಳು ಸಿಡಿದಿವೆ
ಗ್ಲೆನ್ ಮ್ಯಾಕ್ಸ್ವೆಲ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಸತತ ಐದು ಗೆಲುವು ದಾಖಲಿಸಿ ನಾಕೌಟ್ ಹಂತಕ್ಕೇರಿದೆ. ಇದೀಗ ಭರ್ಜರಿ ಫಾರ್ಮ್ನಲ್ಲಿರುವ ಗ್ಲೆನ್ ಮ್ಯಾಕ್ಸ್ವೆಲ್ ಇದೇ ಸಿಡಿಲಬ್ಬರವನ್ನು ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆಸುವ ನಿರೀಕ್ಷೆಯಿದೆ