ಬೆಳಗಾವಿ: ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಎಂದರೆ ಪ್ರಿಯಾಂಕ ಗಾಂಧಿ ಎಂದು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಸಂಸದೆ ಪ್ರಿಯಾಂಕ ಗಾಂಧಿಯನ್ನು ಹಾಡಿಹೊಗಳಿದ್ದಾರೆ. ಬೆಳಗಾವಿಯಲ್ಲಿ ನಡೆದ ಜೈ ಬಾಪು , ಜೈ ಭೀಮ, ಜೈ ಸಂವಿಧಾನ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈ ವರ್ಷದಲ್ಲಿ ನಾವು ಜೈ ಬಾಪು, ಜೈ ಭೀಮ, ಜೈ ಸಂವಿಧಾನ ರ್ಯಾಲಿ ಮಾಡ್ತಿದ್ದೇವೆ. ಡಿಸೆಂಬರ್27 ರಂದು ನಡೆಯಬೇಕಿದ್ದ ರ್ಯಾಲಿ ಇವತ್ತು ನಡೆಯುತ್ತಿದೆ. ಇಡೀ ದೇಶದಲ್ಲಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ನಮ್ಮ ಆರ್ಥಿಕ ಯುಪಿಎ ಸರ್ಕಾರದಲ್ಲಿ 10 ರಷ್ಟು ಹೆಚ್ಚಳವಾಯ್ತು. ನಮ್ಮ ವಿರೋಧಿ ಬಣದವರು ಅನೇಕ ಟೀಕೆ ಮಾಡಿದ್ರು. ಮನಮೋಹನ್ ಸಿಂಗ್ ಒಬ್ಬ ಆರ್ಥಿಕ ತಜ್ಞ.ಸೋನಿಯಾ ಗಾಂಧಿ ಪ್ರಧಾನಮಂತ್ರಿ ಆಗಬೇಕಿತ್ತು. ಅವರು ಪ್ರಧಾನಮಂತ್ರಿ ಆಗದೇ ಖರ್ಚಿ ತ್ಯಾಗ್ ಮಾಡಿದ್ರು. ಆಗ ಆರ್ಥಿಕ ತಜ್ಞ ರನ್ನ ಪಿಎಂ ಮಾಡಿದ್ವಿ. ನಾವು ಇವತ್ತು ಅಂತಹ ತ್ಯಾಗ ಮಾಡಲು ಸಾಧ್ಯವಿದ್ದೇವಾ ಎಂದು ಖರ್ಗೆ ಪ್ರಶ್ನೆ ಮಾಡಿದರು. ಇಂದಿರಾ ಗಾಂಧಿ, ರಾಜೀವ ಗಾಂಧಿ, ಸೋನಿಯಾ ಗಾಂಧಿ ತ್ಯಾಗ ಮಾಡಿದ್ದಾರೆ ಎಂದರು.
ಹೆಗಲ ಮೇಲೆ ಕೇಸರಿ,ಬಿಳಿ, ಹಸಿರಿನ ಶಾಲು, ಎದೆಯೊಳಗೆ ಸಂವಿಧಾನ ; ಗಾಂಧಿ ಭಾರತದ ಆತ್ಮವೆಂದ ಡಿಕೆಶಿ
ಆರ್.ಟಿ.ಐ, ನರೇಗಾ ಸೇರಿ ಅನೇಕ ಜನಪರ ಕಾರ್ಯಕ್ರಮವನ್ನ ಸೋನಿಯಾ ಗಾಂಧಿ ತೆಗೆದುಕೊಂಡು ಬಂದ್ರು. ಇಂತಹ ಯಾವುದೇ ಕಾರ್ಯಕ್ರಮವನ್ನ ಎನಡಿಎ ಸರ್ಕಾರ ತಂದಿದೇಯಾ ಎಂದು ಬಿಜೆಪಿ ಮೈತ್ರಿಕೂಟ ಎನಡಿಎ ವಿರುದ್ಧ ಖರ್ಗೆ ಕಿಡಿಕಾರಿದರು. ಕಾಂಗ್ರೆಸ್ ಪಕ್ಷ ಸದಾ ಜನರ ಕಾರ್ಯಕ್ರಮ ನೀಡಿದೆ. ಸೋನಿಯಾ ಗಾಂಧಿಯವರ ಸಹಕಾರದಿಂದ ಎಐಸಿಸಿ ಅಧ್ಯಕ್ಷ ಆಗಿದ್ದೇನೆ. ಚುನಾವಣೆ ಆದ್ರು ನನ್ನ ಜೊತೆಯಲ್ಲಿ ಇದ್ದು, ನಮಗೆ ಆರಿಸಿ ತಂದಿದ್ದಾರೆ. ಯೆಇದಕ್ಕೆ ನಾನು ಎಲ್ಲರಿಗೂ ಚಿರ ಋಣಿ ಆಗಿದ್ದೇನೆ. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ ಆಗಿ ಕೆಲಸ ಮಾಡ್ತಿರುವೆ. ಬಿಜೆಪಿಯವರು ಸುಮ್ಮನೆ ಹೇಳ್ತಿದ್ದಾರೆ. ಬಿಜೆಪಿ, ಆರ್ಎಸ್ಎಸ್, ಹಿಂದೂ ಮಹಾಸಭಾದವರು ದಲಿತರ ಜೊತೆಗೆ ಇಲ್ಲ, ದಲಿತರ ವಿರೋಧಿಗಳು ಇವರು. ರೈತರಿಗೆ, ದಲಿತರಿಗೆ, ಬಡವರಿಗೆ ಅನುಕೂಲ ಮಾಡುತ್ತಿಲ್ಲ. ಗಾಂಧೀಜಿ ಅವರು ಅಧ್ಯಕ್ಷರಾಗಿದ್ದ ಸ್ಥಾನ, ಜವಾಬ್ದಾರಿಯನ್ನ ನನಗೆ ವಹಿಸಿಕೊಟ್ಟಿದ್ದಾರೆ. ಇದು ನನಗೆ ಹೆಮ್ಮೆಯ ವಿಷಯ ಕಾಂಗ್ರೆಸ್ ಬಲಶಾಲಿಯಾಗಿ ಎಲ್ಲಿಯಾದ್ರು ಇದ್ದರೆ ಕರ್ನಾಟಕದಲ್ಲಿ ಮಾತ್ರ. ಸಮಾವೇಶ ಯಶಸ್ವಿ ಬಗ್ಗೆ ಡಿಕೆಶಿ ಡಿ.ಕೆ.ಶಿವಕುಮಾರ್ ಮತ್ತವರ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಿಯಾಂಕ ಗಾಂಧಿ ಅವರನ್ನು ಹಾಡಿಹೊಗಳಿದ ಖರ್ಗೆ, ಕಿತ್ತೂರು ರಾಣಿ ಚೆನ್ನಮ್ಮಳ ಸ್ವಾಭಿಮಾನ ನೆಲ ಬೆಳಗಾವಿ. ಬಿಜೆಪಿ ವಿರುದ್ಧ ಸ್ವಾಭಿಮಾನದಿಂದ ಹೋರಾಡುವ ಶಕ್ತಿ ಪ್ರಿಯಾಂಕಾ ಗಾಂಧಿ. ಎಂದಿಗೂ ಯಾರಿಗೂ ಹೆದರದ ನಮ್ಮ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಅಂದ್ರೆ ಪ್ರಿಯಾಂಕಾ ಗಾಂಧಿ ಮಾತ್ರ ಎಂದಿದ್ದಾರೆ..