ಮಂಡ್ಯ : ಜಿಲ್ಲೆಯ ಹಲಗೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮನೆ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ 2024ರ ಆ.22 ರಂದು ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮದಲ್ಲಿ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯಲ್ಲಿದ್ದ 45 ಗ್ರಾಂ.ಚಿನ್ನ, 5ಕೆ.ಜಿ ಬೆಳ್ಳಿ ಹಾಗೂ ನಗದು ಕಳ್ಳತನ ನಡೆದಿತ್ತು. ಈ ಸಂಬಂಧ ಮನೆ ಮಾಲೀಕ ಚಿಕ್ಕಬಸವಣ್ಣ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಕಳ್ಳರ ಪತ್ತೆಗೆ ಸಿಪಿಐ ಶ್ರೀಧರ್, ನಾಗೇಂದ್ರ, ರವಿಕಿರಣ್ ಸೇರಿ ವಿಶೇಷ ತಂಡ ರಚಿಸಲಾಗಿತ್ತು. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮೈಸೂರಿನ ಅನಂತ@ ಗುರುವ, ಮೆಡ್ಡ(35) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 301 ಗ್ರಾಂ ಚಿನ್ನ, (22.37 ಲಕ್ಷ ಮೌಲ್ಯ.) ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆಯಲಾಗಿದೆ.
ಇನ್ನೊಂದೆಡೆ ಕೆ.ಎಂ.ದೊಡ್ಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಸರಗಳ್ಳತನ ಮಾಡಿದ್ದಾರೆ. ಜಮೀನಿನ ಬಳಿ ತೆರಳುತ್ತಿದ್ದ ಒಂಟಿ ಮಹಿಳೆಯರ ಟಾರ್ಗೆಟ್ ಮಾಡುತ್ತಿದ್ದರು. ಮದ್ದೂರು ತಾಲೂಕಿನ ಕುರಿಕೆಂಪನದೊಡ್ಡಿ ಗ್ರಾಮದ ಸವಿತಾ ಅವರ ಮಾಂಗಲ್ಯ ಸರ ಕದ್ದಿದ್ದರು. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳ ಬಂಧಿಸುವಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಯಶಸ್ವಿಯಾಗಿದ್ದು, 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ 5 ಜನ ಆರೋಪಿಗಳ ಬಂಧಿಸಿದ್ದಾರೆ. ಹಟ್ನಾ ಗ್ರಾಮದ ಸುದೀಪ್(21), ಚೇತನ್(24), ದರ್ಶನ್(22), ಕಿರಣ್ ಕುಮಾರ್ (30), ಮುತ್ತಗೆರೆ ಗ್ರಾಮದ ಚೇತನ್(25) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 278 ಗ್ರಾಂ ಚಿನ್ನದ ಮಾಂಗಲ್ಯ ಸರಗಳು,20 ಗ್ರಾಂ ಬೆಳ್ಳಿಯ ಕರಡಿಗೆ, ಹಾಗೂ 2 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಹಲಗೂರು ಮತ್ತು ಕೆ.ಎಂ.ದೊಡ್ಡಿ ಪೊಲೀಸರ ಕಾರ್ಯಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.