ಬೀದರ್ ನಲ್ಲಿ ಹಣ ದರೋಡೆ ಪ್ರಕರಣ ಪೊಲೀಸರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಐದು ದಿನವಾದರೂ ಜಾಲ ಹಿಡಿದು ಕಾರ್ಯಾಚರಣೆ ನಡೆಸುತ್ತಿದ್ದರೂ ಇನ್ನೂ ಆರೋಪಿಗಳ ಸುಳಿವು ಸಿಕ್ಕಿಲ್ಲ. ಹಾಡಹಗಲೇ ದರೋಡೆ ಮಾಡಿದ ಹಣದ ಪೆಟ್ಟಿಗೆಯೊಂದಿಗೆ ಪರಾರಿಯಗಿದ್ದ ಆರೋಪಿಗಳು ಎಲ್ಲಿದ್ದಾರೆ ಎಂಬುದು ಪತ್ತೆಯಾಗಿಲ್ಲ.
ಅತ್ತ ಮಂಗಳೂರಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ದರೋಡೆಗೈದ ಆರೋಪಿಗಳು ಬಂಧನವಾದರೆ, ಇತ್ತ ನಗರದಲ್ಲಿ ನಡೆದ ದರೋಡೆ ಮತ್ತು ಶೂಟೌಟ್ ಪ್ರಕರಣವಾಗಿ 5 ದಿನಗಳು ಕಳೆದರೂ ಆರೋಪಿಗಳ ಪತ್ತೆ ಆಗದಿರುವುದು ಬೀದರ ಜನರಲ್ಲಿ ಆತಂಕ ಹೆಚ್ಚಿಸಿದೆ..
ಎಟಿಎಂಗೆ ಹಣ ಹಾಕುವ ವಾಹನ ತಡೆದು ದೋಚಿದ ಹಣ ಪೆಟ್ಟಿಗೆ, ಪರಾರಿಗೆ ಬಳಸಿದ ಬೈಕ್ ಪತ್ತೆಯಾಗಿಲ್ಲ. ಈ ಸಂಬಂಧ ಒಬ್ಬರ ಬಂಧನವೂ ಆಗಿಲ್ಲ, ಪೊಲೀಸರ ಕಾರ್ಯವೈಖರಿ ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ..
ಮಂಗಳವಾರ ಈ ಕೆಲಸಗಳನ್ನು ಮಾಡಿದ್ರೆ ನಿಮಗೆ ಬೇಡವೆಂದರೂ ಸಂಪತ್ತು ಹುಡುಕಿ ಬರುತ್ತೆ.!
ನಗರದ ಹೃದಯ ಭಾಗದ ಶಿವಾಜಿ ವೃತ್ತ ಬಳಿಯ SBI ಬ್ಯಾಂಕ್ ಎದುರು ಜ.16ರಂದು ಇಬ್ಬರು ದುಷ್ಕರ್ಮಿಗಳು ಎಟಿಎಂಗಳಿಗೆ ಹಣ ತುಂಬುವ ಸಿಎಂಎಸ್ ಏಜೆನ್ಸಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 83 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಇಡೀ ರಾಜ್ಯದಲ್ಲೇ ಭಾರಿ ಆತಂಕಕ್ಕೆ ಕಾರಣವಾಗಿದೆ…
ಜಾರ್ಖಂಡ್,ಬಿಹಾರ, ತೆಲಂಗಾಣ, ಆಂಧ್ರ ಪ್ರದೇಶ, ಛತ್ತೀಸಗಡ,ಮಹಾರಾಷ್ಟ್ರ ಸೇರಿ ಇತರೆ ರಾಜ್ಯಗಳಲ್ಲೂ ಪೊಲೀಸರು ತಲಾಶ್ ಮಾಡುತ್ತಿದ್ದಾರೆ. ಎಲ್ಲಿಯೂ ಪತ್ತೆಯಾಗದಿರುವುದು ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ. ದರೋಡೆಕೋರರ ಬಂಧನಕ್ಕಾಗಿ 8 ವಿಶೇಷ ತಂಡ ರಚಿಸಲಾಗಿದೆ. ಈ ಪೈಕಿ ನಾಲ್ಕು ತಂಡಗಳು ಉತ್ತರ ಭಾರತದ ಕಡೆ ತೆರಳಿ ಆರೋಪಿಗಳ ಪತ್ತೆಗೆ ಜಾಲ ಬೀಸಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ದರೋಡೆಕೋರರ ಹುಡುಕಾಟ ನಡೆಸುತ್ತಿದ್ದರೂ ಎಲ್ಲಿ ಸಹ ಪತ್ತೆಯಾಗಿಲ್ಲ. ಹಾಡಹಗಲೇ ಬೀದರ ನಗರದ ಹೃದಯ ಭಾಗದಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ದರೋಡೆ ಮಾಡಿದ ಆರೋಪಿಗಳನ್ನು ಬಂಧಿ ಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂಬ ಆರೋಪಗಳು ಜನರಿಂದ ಕೇಳಿ ಬರುತ್ತಿವೆ.
ಸಣ್ಣಪುಟ್ಟ ಪ್ರಕರಣಗಳಿದ್ದರೂ ಕೆಲವೇ ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸುವ ಪೊಲೀಸರು ಇಡೀ ಜಿಲ್ಲೆ ತ ಮತ್ತು ರಾಜ್ಯಾದ್ಯಂ ತ ಭಾರಿ ಸದ್ದು ಮಾಡಿದ – ಪ್ರಕರಣದಲ್ಲಿ ಒಬ್ಬರನ್ನೂ ಬಂಧಿಸಲು ಏಕೆ ಸಾಧ್ಯವಾಗುತ್ತಿಲ್ಲ. ಘಟನೆ ನಡೆದರೂ ತನಿಖೆ ಚುರು – ಕುಗೊಳಿಸಲು ನಿರ್ಲಕ್ಷ್ಯ ಮಾಡಿದ್ದೇಕೆ? ಎಂಬಿತ್ಯಾದಿ – ಪ್ರಶ್ನೆ ಜನರಲ್ಲಿ ಕಾಡಲಾರಂಭಿಸಿದ್ದೆ. ಸದ್ಯ ಬೀದರ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರಿಗೆ ಕಾಲ ಹಾಗು ಮೇಸಜ ಮಾಡಿ ಮಾಹಿತಿ ಕೆಳಿದರು ಯಾವುದೇ ಪ್ರತಿಕ್ರಿಯೆ ಇಲ್ಲಿ ದೂರವಾಣಿ ಕೂಡಾ ರಿಸೀವ ಮಾಡುತ್ತಾ ಇಲ್ಲ.