ಬೆಳಗಾವಿ: ಬೆಳಗಾವಿಯಲ್ಲಿ 1924ರ ಡಿಸೆಂಬರ್ 26 ರಂದು ನಡೆದ ಕಾಂಗ್ರೆಸ್ ಅಧಿವೇಶನ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಪ್ರಮುಖ ಘಟನೆ. ಅಂದಿನ ಅಧಿವೇಶನದಲ್ಲಿ, ಮಹಾತ್ಮ ಗಾಂಧೀಜಿ ಅವರು ಖಾದಿ ಬಗ್ಗೆ ಮನವಿ ಮಾಡಿದ್ದರು ಮತ್ತು ಬ್ರಿಟಿಷರ ವಿರುದ್ಧ ಅಸಹಕಾರಕ್ಕೆ ಕರೆ ನೀಡಿದ್ದರು.
ಈ ಅಧಿವೇಶನವು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿತ್ತು. ಅದೇ ಮಾದರಿಯಲ್ಲಿ ದೇಶಾದ್ಯಂತ ಸಂವಿಧಾನ ರಕ್ಷಣೆ ಚಳವಳಿ ಹೆಸರಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ವತಿಯಿಂದ ‘ಗಾಂಧಿ ಭಾರತ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಂಗಳವಾರ ಈ ಕೆಲಸಗಳನ್ನು ಮಾಡಿದ್ರೆ ನಿಮಗೆ ಬೇಡವೆಂದರೂ ಸಂಪತ್ತು ಹುಡುಕಿ ಬರುತ್ತೆ.!
ಇದೀಗ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಕೈ ನಾಯಕರ ದಂಡು ಬಂದಿಳಿದಿದೆ. ಕಾಂಗ್ರೆಸ್ ನಾಯಕರ ಹಾಗೂ ಸಚಿವರ ಜೊತೆಗೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಆಗಮಿಸಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಹೌದು ಇವತ್ತು ಬೆಳಗಾವಿಯಲ್ಲಿ ಗಾಂಧಿ ಭಾರತ ಸಮವೇಶ ನಡೆಯಲಿದೆ ಮತ್ತು ಅದರಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಕಾಂಗ್ರೆಸ್ ಮುಖಂಡರೆಲ್ಲ ಭಾಗಿಯಾಗುತ್ತಿದ್ದಾರೆ. ಬೆಳಗ್ಗೆ ಸಚಿವರಾದ ಕೆಎನ್ ರಾಜಣ್ಣ ಮತ್ತು ಅಶೋಕ್ ಖೇಣಿ ಅವರೊಂದಿಗೆ ಸೋಮಶೇಖರ್ ಸಹ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಸಮಾವೇಶದಲ್ಲಿ ಭಾಗಿಯಾಗಲು ಅವರು ಬಂದಿದ್ದಾರೆಯೇ? ಕಾದು ನೋಡಬೇಕು.