ಚಿಕ್ಕಮಗಳೂರು: ಚಿಕ್ಕಮಗಳೂರು ಹಾಗೂ ತರೀಕೆರೆಯ ಹೆಸರಾಂತ ಎವಿಎಸ್ ಬಿ.ಎಡ್ ಕಾಲೇಜ್ ವತಿಯಿಂದ ಹಾಗೂ ಉತ್ತರ ಕನ್ನಡ ಜಿಲ್ಲಾ ಶಿಕ್ಷಕರ ನಿರಂತರ ಸಹಾಯವಾಣಿ ಸಹಯೋಗದೊಂದಿಗೆ ನಗರದ ಐಡಿಎಸ್ಜಿ ಕಾಲೇಜು ಸಮೀಪದ ಮಹಾಲಕ್ಷ್ಮಿ ದೇವಸ್ಥಾನದ ಎದುರಿನ ಎವಿಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಯಶಸ್ವಿಯಾಗಿದೆ.
ಉದ್ಯೋಗ ಮೇಳದಲ್ಲಿ 450 ಕ್ಕೂ ಹೆಚ್ಚು ಜನ ಉದ್ಯೋಗಕ್ಕಾಗಿ ನೋಂದಣಿ ಮಾಡಿಕೊಂಡಿದ್ರು ಇದರಲ್ಲಿ 300 ಜನರಿಗೆ ಪ್ರತಿಷ್ಠಿತ ಕಂಪನಿಗಳು ಸ್ಥಳದಲ್ಲೇ ಆಫರ್ ಲೆಟರ್ ನೀಡಿವೆ. ಈ ಸಂದರ್ಭದಲ್ಲಿ ಮಾತನಾಡಿದ ಎವಿಎಸ್ ಬಿಎಡ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಅಜೇಶ್ ಚಿಕ್ಕಮಗಳೂರಿನಲ್ಲಿ ಮೊದಲ ಬಾರಿ ಈ ಪ್ರಯತ್ನ ಮಾಡಲಾಗಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಅನ್ನದಾನ, ವಿದ್ಯಾ ದಾನ ಸೇರಿದಂತೆ ಎಲ್ಲ ದಾನಗಳನ್ನು ಮಾಡುತ್ತಾರೆ. ಆದರೆ ನಾವು ಯಾರು ಮಾಡದ ಉದ್ಯೋಗ ದಾನವನ್ನು ಮಾಡುತ್ತಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಇದೆ ರೀತಿ ಉಚಿತವಾಗಿ ಉದ್ಯೋಗ ಮೇಳವನ್ನು ಆಯೋಜನೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇವೆ ಎಂದರು.