ಮಂಗಳೂರು:– ಫೇಕ್ ನಂಬರ್ ಪ್ಲೇಟ್ ಜಾಲ ಜೋರಾಗಿರುವ ಜಾಲಾದ ಬಗ್ಗೆ ಬ್ಯಾಂಕ್ ದರೋಡೆ ತನಿಖೆ ವೇಳೆ ಬಟಾ ಬಯಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ರಾಜ್ಯಾದ್ಯಂತ ಸಾವಿರಾರು ವಾಹನಗಳು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಓಡಾಡುತ್ತಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಬ್ಯಾಂಕ್ ದರೋಡೆ ಮಾಡಿದ ದರೋಡೆಕೋರರು ಫಿಯೆಟ್ ಕಾರಿನಲ್ಲಿ ತಲಪಾಡಿ ಟೋಲ್ ಮೂಲಕ ತೆರಳಿದ್ದಾರೆ ಎಂಬುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇನ್ನೊಂದು ಕಾರ್ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್ನಿಂದ ಪಾಸಾಗಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಆಗ ಈ ನಕಲಿ ಪ್ಲೇಟ್ ಗಳ ವಾಹನಗಳ ಹಾವಳಿ ಕಂಡು ಬಂದಿದೆ.
ಮಂಡ್ಯ ಮಹಿಳೆಗೂ ಪಂಗನಾಮ: ಚಿನ್ನ ವಂಚಕಿ ಐಶೂ ವಿರುದ್ಧ ಮತ್ತೊಂದು ಆರೋಪ!
ಬ್ರಹ್ಮರಕೂಟ್ಲು ಟೋಲ್ ಗೇಟ್ನಲ್ಲಿ ಬ್ಯಾಂಕ್ ದರೋಡೆಕೋರರು ಪಾಸಾಗಿದ್ದಾರೆಂಬ ಶಂಕೆಯಿಂದ ಪರಿಶೀಲಿಸಿದ್ದರೂ, ಅವರು ಸರ್ವಿಸ್ ರಸ್ತೆಯ ಮೂಲಕ ತೆರಳಿದ್ದಾರೆ ಎಂಬುದು ಬಳಿಕ ಗೊತ್ತಾಗಿದೆ. ಆದರೆ, ಆ ಟೋಲ್ ಗೇಟ್ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಾರು, ಟೆಂಪೋ ಟ್ರಾವೆಲ್ಲರ್, ಲಾರಿ ಸೇರಿದಂತೆ ಹತ್ತಾರು ವಾಹನಗಳು ಫೇಕ್ ನಂಬರ್ ಪ್ಲೇಟ್ ಅಳವಡಿಸಿರುವುದು ಬೆಳಕಿಗೆ ಬಂದಿದೆ.
ಈ ನಕಲಿ ನಂಬರ್ ಪ್ಲೇಟನ್ನು ಟೋಲ್ ಗೇಟ್ನವರು ಪರಿಶೀಲಿಸುವುದಿಲ್ಲ. ಯಾಕೆಂದರೆ, ಫಾಸ್ಟ್ ಟ್ಯಾಗ್ನಿಂದ ಹಣ ಪಾವತಿಯಾಗಿ ಗೇಟ್ ಓಪನ್ ಆಗುತ್ತದೆ, ವಾಹನ ಮುಂದೆ ಹೋಗುತ್ತದೆ. ಆ ಸಂದರ್ಭ ವಾಹನದ ನಂಬರ್ ಹಾಗೂ ಫಾಸ್ಟ್ ಟ್ಯಾಗ್ನಲ್ಲಿ ಬಂದ ನಂಬರನ್ನು ಟೋಲ್ ಸಿಬ್ಬಂದಿ ಟ್ಯಾಲಿ ಮಾಡುವುದಿಲ್ಲ. ಅಷ್ಟೊಂದು ಸಮಯಾವಕಾಶವೂ ಅವರಿಗೆ ಇರುವುದಿಲ್ಲ. ಆದರೆ ಪೊಲೀಸರು ಕಳೆದ ಮೂರು ದಿನದ ಸಿಸಿ ಕ್ಯಾಮರಾ ದೃಶ್ಯವನ್ನು ಪರಿಶೀಲಿಸಿದಾಗ ಇದೊಂದೇ ಟೋಲ್ಗೇಟ್ನಲ್ಲೇ ಹತ್ತಕ್ಕೂ ಅಧಿಕ ನಕಲಿ ನಂಬರ್ ಪ್ಲೇಟ್ ಇರುವ ವಾಹನಗಳು ಸಂಚರಿಸಿರುವುದು ಪತ್ತೆಯಾಗಿದೆ.