ಕುರಿಗಾಗಿ ಹನುಮಂತ ತಮ್ಮ ಹಾಡಿನ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಬಿಗ್ ಬಾಸ್ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಪಡೆದಿದ್ದು ಇದೀಗ ಬಿಗ್ ಬಾಸ್ ಕಪ್ ಗೆಲ್ಲುವ ಎಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರೇ ಗೆಲ್ಲುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ರಜತ್, ಉಗ್ರಂ ಮಂಜು, ಮೋಕ್ಷಿತಾ ಕೂಡ ಟಫ್ ಸ್ಪರ್ಧಿಗಳಾಗಿ ಫಿನಾಲೆ ತಲುಪಿದ್ದು, ಯಾರು ಟ್ರೋಪಿ ಗೆಲ್ಲುತ್ತಾರೆ ಎಂಬ ಕುತೂಹಲ ಇದೆ. ಈ ಮಧ್ಯೆ ಹನುಮಂತ ತಾವು ಈಗಾಗಲೇ ಟ್ರೋಫಿ ಗೆದ್ದಾಗಿದೆ ಎಂದು ಹೇಳಿದ್ದಾರೆ.
ಹನುಮಂತ ದೊಡ್ಮನೆಗೆ ಎಂಟ್ರಿಕೊಟ್ಟ ಮೊದಲ ದಿನದಿಂದಲೂ ಟಫ್ ಕಾಂಪಿಟೇಟರ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಬರುವಾಗ ಅವರು ಟ್ರೋಫಿ ಮೇಲೆ ಕಣ್ಣಿಟ್ಟುಕೊಂಡು ಬಂದಿರಲಿಲ್ಲ. ‘ನಾನು ಬಂದ ಎರಡೇ ವಾರಕ್ಕೆ ಸುದೀಪ್ ಸರ್ ಕಡೆಯಿಂದ ಕಿಚ್ಚನ ಚಪ್ಪಾಳೆ ಸಿಕ್ಕಿತು. ಅದೇ ನನಗೆ ಬಿಗ್ ಬಾಸ್ ಟ್ರೋಫಿ. ಆಗಲೇ ನಾನು ಕಪ್ ಗೆದ್ದೆ’ ಎಂದು ಹನುಮಂತ ಅವರು ಹೇಳಿದ್ದಾರೆ.
ಇಡೀ ಬಿಗ್ ಬಾಸ್ ಮನೆಯಲ್ಲಿ ಒಬ್ಬೊಬ್ಬರ ಆಟ ಒಂದೊಂದು ರೀತಿ ಇರುತ್ತದೆ. ಎಲ್ಲರೂ ವೈಯ್ತಕಿಕ ದ್ವೇಷದ ಕಡೆಗೆ ಗಮನ ನೀಡುತ್ತಾರೆ. ಒಬ್ಬರನ್ನು ಇನ್ನೊಬ್ಬರು ಟಾರ್ಗೆಟ್ ಮಾಡಿಕೊಂಡು ಕಾಲ ಕಳೆಯುತ್ತಾರೆ. ಆಟಕ್ಕಾಗಿ ಇನ್ನೊಬ್ಬರನ್ನು ತುಳಿಯಲು ಪ್ರಯತ್ನಿಸುತ್ತಾರೆ. ಇತರರ ಮೇಲೆ ಪಿತೂರಿ ಮಾಡುತ್ತಾರೆ. ಆದರೆ ಹನುಮಂತ ಇಂಥ ಕೆಲಸ ಮಾಡದೆ ತಮ್ಮ ನೇರಾ ನೇರಾ ನುಡಿಯಿಂದ ಪ್ರತಿಯೊಬ್ಬರ ಮನಸ್ಸು ಗೆದ್ದಿದ್ದಾರೆ.