ವಾಷಿಂಗ್ ಟನ್ ಡಿಸಿ: ಅಮೇರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಇದು ಅಕ್ರಮವಾಗಿ ಅಮೆರಿಕಾಗೆ ನುಸುಳಿರುವ ಹಲವರಿಗೆ ಬಿಸಿ ಮುಟ್ಟಿಸಿದೆ.
ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ದಕ್ಷಿಣ ಗಡಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಮೆಕ್ಸಿಕೋ- ಅಮೇರಿಕಾ ಗಡಿ ಭಾಗದಲ್ಲಿ ಅಮೇರಿಕಾ ಸೇನೆಯನ್ನು ನಿಯೋಜಿಸಲಾಗುತ್ತದೆ, ಈ ಮೂಲಕ ಅಕ್ರಮ ನುಸುಳುಕೋರರಿಗೆ ಬಾಗಿಲು ಬಂದ್ ಆಗಲಿದೆ, ಈಗಾಗಲೇ ಅಮೇರಿಕಾ ಪ್ರವೇಶಿಸಿರುವ ಅಕ್ರಮ ನುಸುಳುಕೋರರನ್ನು ಹೊರಹಾಕುತ್ತೇವೆ, ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಿಸುವ ಕೆಲಸ ನಡೆಯಲಿದೆ ಎಂದು ಹೇಳಿದ್ದಾರೆ.
ಅಮೇರಿಕಾ ಸೇನೆಯನ್ನು ಬಲಪಡಿಸುವುದು ನಮ್ಮ ಗುರಿಯಾಗಿದ್ದು 2017 ರಂತೆ ಜಗತ್ತಿನ ಬಲಿಷ್ಠ ಸೇನೆಯನ್ನು ನಿರ್ಮಿಸುತ್ತೇವೆ ಎಂದು ಹೇಳಿರುವ ಟ್ರಂಪ್ ಸರ್ಕಾರದ ಪಾರದರ್ಶಕತೆಗಾಗಿ ಇಲಾಖೆಯನ್ನು ಸ್ಥಾಪಿಸುತ್ತೇವೆ, ಭಯೋತ್ಪಾದನೆಯನ್ನು ಮಟ್ಟ ಹಾಕುತ್ತೇವೆ ಎಂದಿದ್ದಾರೆ.