ಬೆಂಗಳೂರು:- BBMP ಕಸದ ಟೆಂಡರ್ ಕೊಡಿಸುವುದಾಗಿ ಮಹಿಳೆಗೆ ವಂಚನೆ ಎಸಗಿದ ಆರೋಪದಡಿ ಕೇಸ್ ದಾಖಲಾಗಿದೆ.
ಬಿಬಿಎಂಪಿ ಕಸದ ಟೆಂಡರ್ ಕೊಡಿಸುವುದಾಗಿ ನೆರೆ ಮನೆಯ ವ್ಯಕ್ತಿಯಿಂದ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೇರೋಹಳ್ಳಿಯ ಸೌಭಾಗ್ಯ ಎಂಬುವವರಿಗೆ ವಂಚಿಸಿದ್ದ ಬಿಬಿಎಂಪಿ ಕಸದ ಗುತ್ತಿಗೆದಾರ ಹರೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿಮ್ಮ ಬಳಿ ಇರುವ ಚಿನ್ನಾಭರಣ ಒತ್ತೆ ಇಟ್ಟು ಹಣ ತಂದು ಕೊಡಿ ಅಂದಿದ್ದ ಹರೀಶ್, 90 ಗ್ರಾಂ ಚಿನ್ನವನ್ನು ಕೊಟ್ಟಿದ್ದ ಮಹಿಳೆ, ನೀವೆ ಒತ್ತೆ ಇಟ್ಟು ಹಣ ತಗೊಳಿ ಎಂದಿದ್ದಾರೆ. ಹಣ ಕೊಡುವಾಗ ಗೋಪಾಲ್ ಹಾಗೂ ಪಿಳ್ಳರಾಜು ಎಂಬುವರನ್ನ ಸಾಕ್ಷಿ ಇಟ್ಟು ಹಣ ಹಾಗೂ ಚಿನ್ನಾಭರಣವನ್ನು ಸೌಭಾಗ್ಯ ಕೊಟ್ಟಿದ್ದಾರೆ. ಆದರೆ ಎರಡು ವರ್ಷದಿಂದ ಹಣವೂ ಇಲ್ಲ, ಟೆಂಡರ್ ಇಲ್ಲದೆ ವಂಚನೆ ಮಾಡಿದ್ದಾರೆ.