ಹಾವೇರಿ: ಎನ್ಹೆಚ್4 ರಸ್ತೆಯಲ್ಲಿ ಗಿಡಿಗಳಿಗೆ ನೀರು ಹಾಕುತ್ತಿದ್ದ ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದಿದ್ದು, ಸ್ವಲ್ಪದರಲ್ಲೇ ದೊಡ್ಡ ಅನಾಹುತವೊಂದು ತಪ್ಪಿದೆ. ಹಾವೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಾತ ಸಂಭವಿಸಿದ್ದು, ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಡಿವೈಡರ್ ಮಧ್ಯದ ಗಿಡಗಳಿಗೆ ನೀರು ಹಾಯಿಸುವಾಗ ಸಂಭವಿಸುತಿದ್ದ ಟ್ರ್ಯಾಕ್ಟರ್ ಗೆ ಕ್ರೂಡ್ ಆಯಿಲ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ರಸ್ತೆಯ ಮೇಲೆ ಬ್ಯಾರಲ್ ಗಟ್ಟಲೆ ಕ್ರೂಡ್ ಆಯಿಲ್ ಹರಿದಿದ್ದು, ಸರ್ವಿಸ್ ರಸ್ತೆಯಲ್ಲಿ ಹರಿಯುತ್ತಿದ್ದ ಆಯಿಲ್ ತುಂಬಿಕೊಳ್ಳಲು ಯುವಕರು ಮುಗಿಬಿದಿದ್ದರು. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.