ವಿಜಯಪುರ: ಇಟ್ಟಿಗೆ ಪಟ್ಟಿಯಲ್ಲಿ ಕಾರ್ಮಿಕರ ಹಲ್ಲೆ ಪ್ರಕರಣದ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲಾ ಎಸ್ ಪಿ ಲಕ್ಷ್ಮಣ ನಿಂಬರಿಗೆ ಮಾತನಾಡಿ, ಇಟ್ಟಿಗೆ ಪಟ್ಟಿಯ ಮಾಲೀಕ ಖೇಮು ರಾಥೋಡ್ ಹಾಗೂ ಸಹಚರರಿಂದ ಹಲ್ಲೆ ನಡೆದಿದೆ. ಮುಂಗಡ ಹಣ ಮತ್ತು ಕೆಲಸ ಮಾಡುವ ವಿಚಾರದ ಕುರಿತು ಮೂವರು ಕಾರ್ಮಿಕರ ಕಾಲುಗಳನ್ನು ಕಟ್ಟಿ ಪೈಪ್ ಗಳಿಂದ ಪಾದಗಳಿಗೆ ಅಮಾನುಷವಾಗಿ ಹಲ್ಲೆ ಮಾಡಿದ್ದು ಮಾಡಲಾಗಿತ್ತು. ಕಾರ್ಮಿಕರ ಮೇಲಿನ ಹಲ್ಲೆಯ ಕುರಿತು ವಿಡಿಯೋ ವೈರಲ್ ಆಗಿತ್ತು. ಪೊಲೀಸ್ ಇಲಾಖೆ ಹಲ್ಲೆ ಮಾಡಿದವರ ಪತ್ತೆ ಮಾಡಿ ದೂರು ದಾಖಲಿಸಿಕೊಂಡಿದೆ. ಘಟನೆಗೆ ಸಂಬಂಧಪಟ್ಟಂತೆ ಖೇಮು ರಾಥೋಡ್ ಹಾಗೂ ಓರ್ವನನ್ನ ಬಂಧಿಸಲಾಗಿದೆ. ಪರಾರಿಯಾಗಿರುವ ಇತರೆ ಮೂವರು ಆರೋಪಿಗಳನ್ನು ಬಂಧಿಸಲು ಜಾಲ ಬೀಸಲಾಗಿದೆ. ಆದಷ್ಟು ಬೇಗ ಪರಾರಿಯಾಗಿರುವವರನ್ನು ಬಂಧಿಸುತ್ತೇವೆ ಎಂದಿದ್ಜದಾರೆ.
ಜಮಖಂಡಿ ಮೂಲದ ಕಾರ್ಮಿಕರು ಇಟ್ಟಂಗಿ ಭಟ್ಟಿಯ ಕೆಲಸಕ್ಕೆ ಇಲ್ಲಿ ಬಂದಿದ್ದರು. ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋದವರು ವಾಪಸ್ ಬರುವುದು ತಡವಾದ ಕಾರಣಕ್ಕೆ ಹಲ್ಲೆ ನಡೆಸಲಾಗಿತ್ತು. ಹಲ್ಲೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ ವೈರಲ್ ಅದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.